ADVERTISEMENT

ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಎಂಬುದು ಗೊತ್ತಿಲ್ಲ: ನಟ ಕಾರ್ತಿಕ್‌ ಆರ್ಯನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 11:12 IST
Last Updated 5 ಡಿಸೆಂಬರ್ 2021, 11:12 IST
ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌
ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌   

ಮುಂಬೈ: ನನ್ನ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನನಗೆ ತಿಳಿದಿಲ್ಲ. ನನ್ನ ತಾಯಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ನಾನೀಗ ಒಬ್ಬಂಟಿಯಾಗಿದ್ದೇನೆ. ಬಾಲಿವುಡ್‌ನಲ್ಲಿ ನಾನು ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್' ಎಂದು ಹೇಳಿದ್ದಾರೆ.

ಬ್ಯಾಂಕ್ ಬ್ಯಾಲೆನ್ಸ್ ಕುರಿತು ಕಾರ್ತಿಕ್‌ ಆರ್ಯನ್‌ರನ್ನು ಪ್ರಶ್ನಿಸಿದಾಗ, ‘ಈ ಬಗ್ಗೆ ನನಗೆ ಗೊತ್ತಿಲ್ಲ. ಇದು ನನ್ನ ತಾಯಿಗೆ ತಿಳಿದಿದೆ. ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಹೊಸ ಲ್ಯಾಂಬರ್ಗಿನಿ ಕಾರಿನಲ್ಲಿ ಮೊದಲು ಕುಳಿತವರೂ ಸಹ ನನ್ನ ತಾಯಿಯೇ‘ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.