ADVERTISEMENT

ಕತ್ರೀನಾ–ವಿಕ್ಕಿ ಮದುವೆಯಂತೆ ಪಾಸ್‌ವರ್ಡ್‌ಗಳೂ ಭದ್ರವಾಗಿರಲಿ: ದೆಹಲಿ ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2021, 6:29 IST
Last Updated 11 ಡಿಸೆಂಬರ್ 2021, 6:29 IST
ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌
ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌   

ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಅವರ ಮದುವೆ ಸಮಾರಂಭವು ಖಾಸಗಿಯಾಗಿ ನೆರವೇರಿದೆ. ಕತ್ರೀನಾ–ವಿಕ್ಕಿ ಸಂಬಂಧಿಗಳು ಮತ್ತು ಆಪ್ತರು ಸೇರಿದಂತೆ ಕೇವಲ 120 ಮಂದಿಗೆ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಮಾರಂಭಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು.

ವಿವಾಹ ಕಾರ್ಯಕ್ರಮದ ಭದ್ರತೆ ಹಾಗೂ ಖಾಸಗೀತನದ ಕುರಿತು ಸಾಮಾಜಿಕ ತಾಣಗಳಲ್ಲಿ ಹಲವರು ಮೀಮ್‌ಗಳ ಮೂಲಕ ನಗೆಚಟಾಕಿ ಹಾರಿಸಿದ್ದಾರೆ. ಈ ವಿಚಾರದಲ್ಲಿ ದೆಹಲಿ ಪೊಲೀಸ್‌ ಇಲಾಖೆಯು ಹಿಂದೆಬಿದ್ದಿಲ್ಲ.

ಕತ್ರೀನಾ–ವಿಕ್ಕಿ ಮದುವೆಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ದೆಹಲಿ ಪೊಲೀಸ್‌ ಇಲಾಖೆಯು ತಮಾಷೆಯ ಸಲಹೆಯೊಂದನ್ನು ನೀಡಿದೆ.

ADVERTISEMENT

'ಹಲೋ ಜನರೇ. ನಿಮ್ಮ ಪಾಸ್‌ವರ್ಡ್‌ಗಳನ್ನು #VicKat ಮದುವೆಯಂತೆಯೇ ಸುರಕ್ಷಿತವಾಗಿರಿಸಿಕೊಳ್ಳಿ' ಎಂದು ದೆಹಲಿ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿದೆ.

#Vickat ಎಂಬುದು ಕೆಲ ದಿನಗಳಿಂದ ಟ್ರೆಂಡ್‌ ಆಗುತ್ತಿರುವ ಜನಪ್ರಿಯ ಹ್ಯಾಶ್‌ಟ್ಯಾಗ್‌ ಆಗಿದೆ. ದೆಹಲಿ ಪೊಲೀಸರ ಈ ಟ್ವೀಟ್‌ಗೆ ಸಾವಿರಾರು ಲೈಕ್‌ಗಳು ಬಂದಿದ್ದು, ನೂರಾರು ಜನ ರೀಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.