ADVERTISEMENT

ಖಾಸಗಿಯಾಗಿ ನಡೆಯಲಿದೆ ಕತ್ರಿನಾ– ವಿಕ್ಕಿ ವಿವಾಹ ಸಮಾರಂಭ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 12:27 IST
Last Updated 5 ಡಿಸೆಂಬರ್ 2021, 12:27 IST
ವಿಕ್ಕಿ ಕೌಶಲ್– ಕತ್ರಿನಾ ಕೈಫ್
ವಿಕ್ಕಿ ಕೌಶಲ್– ಕತ್ರಿನಾ ಕೈಫ್   

ಮುಂಬೈ: ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್(38) ಮತ್ತು ವಿಕ್ಕಿ ಕೌಶಲ್(33) ಮುಂದಿನ ವಾರ ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 7 ರಿಂದ 9ರವರೆಗೆರಾಜಸ್ಥಾನದಲ್ಲಿ ವಿವಾಹ, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮಗಳು ನಡೆಯಲಿವೆ.

‘ಈ ಸಮಾರಂಭದಲ್ಲಿ ಹತ್ತಿರದ ಸಂಬಂಧಿಗಳು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಮಾತ್ರ ಹಾಜರಿರುತ್ತಾರೆ. ಆ ನಂತರದ ಕೆಲ ದಿನಗಳಲ್ಲಿ ಬಾಲಿವುಡ್‌ನ ವೃತ್ತಿ ಬಾಂಧವರಿಗಾಗಿ ಸಮಾರಂಭವನ್ನು ಏರ್ಪಡಿಸಲಾಗುತ್ತದೆ‘ ಎಂದು ತಿಳಿದುಬಂದಿದೆ.

ADVERTISEMENT

ವಿವಾಹ ಕಾರ್ಯಕ್ರಮವನ್ನು ಅತ್ಯಂತ ಖಾಸಗಿ ಸಮಾರಂಭವಾಗಿ ನಡೆಸಲು ವಿಕ್ಕಿ-ಕತ್ರೀನಾ ಜೋಡಿ ಬಯಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.