
ಕೆಂಪೇಗೌಡ, ಸನ್ಮಿತಾ
ಹಾಸ್ಯ ಕಲಾವಿದ ಕೆಂಪೇಗೌಡ ನಾಯಕನಾಗಿ ನಟಿಸಿರುವ ‘ಕಟ್ಲೆ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ. ಶ್ರೀವಿಧಾ ಅಭಿನಂದನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಕಟ್ಲೆಗೆ’ ಬೇರೆ, ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥವಿದೆ. ನಮ್ಮ ಸಿನಿಮಾದಲ್ಲಿ ಇದನ್ನು ಕಾಲ ಎಂಬ ಅರ್ಥದಲ್ಲಿ ಬಳಸಿದ್ದೇವೆ. ಪ್ರತಿಯೊಂದು ಜೀವರಾಶಿಗೆ ಕಾಲ ಎಂಬುದು ಇರುತ್ತದೆ. ಯಾವುದೋ ಒಂದು ವ್ಯತ್ಯಾಸದಿಂದ ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಅದನ್ನು ತಿಳಿಯಲು ಚಿತ್ರ ನೋಡಬೇಕು. ಈ ಕಥೆ ಅಳುಸುತ್ತದೆ, ನಗಿಸುತ್ತದೆ. ಕ್ಲೈಮಾಕ್ಸ್‌ನಲ್ಲಿ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಸಿನಿಮಾ ಬಿಡುಗಡೆಗೆ ಸಿದ್ಧವಿದೆ’ ಎಂದರು ನಿರ್ದೇಶಕ.
ಭರತ್‌ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸನ್ಮಿತಾ ಮತ್ತು ಅಮೃತಾ ನಾಯಕಿಯರು. ಮುಖ್ಯ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಟೆನ್ನಿಸ್ ಕೃಷ್ಣ, ತಬಲ ನಾಣಿ, ಹರೀಶ್ ರಾಜ್, ಗಣೇಶ್ ರಾವ್ ಕೇಸರಕರ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಶಿರಸಿ, ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿ.ನಾಗೇಂದ್ರಪ್ರಸಾದ್, ಭರ್ಜರಿ ಚೇತನ್ ಕುಮಾರ್ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯದ ಗೀತೆಗಳಿಗೆ ಶ್ರೀಧರ್ ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ ಛಾಯಾಚಿತ್ರಗ್ರಹಣ, ಚೆಲುವಮೂರ್ತಿ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.