ADVERTISEMENT

ಸೆಟ್ಟೇರಿದ ‘ಕವಳ’ ಸಿನಿಮಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 14:30 IST
Last Updated 26 ಫೆಬ್ರುವರಿ 2026, 14:30 IST
ಚಿತ್ರತಂಡ
ಚಿತ್ರತಂಡ   

ಮಾಸ್, ಆ್ಯಕ್ಷನ್ ಕಥೆಯನ್ನು ಹೊಂದಿರುವ ‘ಕವಳ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಶ್ರೀ ಜೈ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

‘ಕವಳ’ ಪದಕ್ಕೆ ಹಲವು ಅರ್ಥಗಳಿವೆ. ಶಿವನಿಗೆ ಕವಳೇಶ್ವರ ಎಂದೂ ಕರೆಯುತ್ತಾರೆ. ‘ಕವಳ’ ಎಂಬ ರೌಡಿ ಕೂಡ ಇದ್ದ. ಆತನ ಬದುಕಿನ ಘಟನೆಗಳಿಂದಲೂ ಕಥೆ ಸ್ಫೂರ್ತಿ ಪಡೆದಿದೆ. ಒಟ್ಟಾರೆಯಾಗಿ ಶಿವನೊಂದಿಗೆ ಸಂಬಂಧ ಹೊಂದಿರುವ ಕಥೆ. ತಮಿಳು ನಟ ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮಾರಾಟದ ದೃಷ್ಟಿಯಿಂದ ಬೇರೆ ಭಾಷೆಗಳ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದೇವೆ. ಯುಗಾದಿ ನಂತರ ಚಿತ್ರೀಕರಣ ಪ್ರಾರಂಭಿಸುತ್ತೇವೆ. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳಲಿದೆ’ ಎಂದರು ನಿರ್ದೇಶಕ. 

ಸಿನಿಮಾವನ್ನು ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ಅವರು ನಿರ್ಮಿಸುತ್ತಿದ್ದಾರೆ. ಸಂದೀಪ್ ನಾಗರಾಜ್ ಚಿತ್ರದ ನಾಯಕ. ಎ.ಕರುಣಾಕರನ್ ಛಾಯಾಚಿತ್ರಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ, ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿದೆ.

ADVERTISEMENT

ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿ ರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್, ಗಿಲ್ಲಿ, ಪ್ರಕಾಶ್ ತೂಮಿನಾಡು ಮುಂತಾದವರು ತಾರಾಗಣದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.