ADVERTISEMENT

ಯಶ್ ಅಭಿಮಾನಿಗಳಿಗೆ ಖುಷಿ ಸುದ್ದಿ ಹೊತ್ತು ತಂದ ಕೆಜೆಎಫ್ ಚಾಫ್ಟರ್ 2 ಚಿತ್ರತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2021, 10:31 IST
Last Updated 7 ಡಿಸೆಂಬರ್ 2021, 10:31 IST
ಕೆಜಿಎಫ್ ಚಾಪ್ಟರ್ 2
ಕೆಜಿಎಫ್ ಚಾಪ್ಟರ್ 2   

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಫ್ಟರ್ 2’ ಸಿನಿಮಾಕ್ಕೆ ಸಂಬಂಧಿಸಿದಂತೆ ಬಹಳ ದಿನಗಳ ನಂತರ ಅಪ್ಡೇಟ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಚಿತ್ರದಲ್ಲಿ ‘ಅಧೀರಾ’ ಪಾತ್ರದಲ್ಲಿ ಅಭಿನಯಿಸಿರುವ ಸಂಜಯ್ ದತ್ ಅವರ ಪಾಲಿನ ಡಬ್ಬಿಂಗ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವಿಟರ್‌ನಲ್ಲಿ ಇಂದು ಮಾಹಿತಿ ಹಂಚಿಕೊಂಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಫ್ಟರ್ 2 ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಬಿಡುಗಡೆಗೆ ಸಿದ್ದವಾಗಿದೆ. ಮತ್ತೆ ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೆ ಹೋಗಲಿದೆ ಎಂದು ಊಹಾಪೋಹಗಳು ಎದ್ದಿದ್ದವು.ಆದರೆ, ಸಂಜಯ್ ದತ್ ಅವರ ಡಬ್ಬಿಂಗ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ, ಏಪ್ರಿಲ್ 14ಕ್ಕೆ ಕೆಜಿಎಫ್ ಅಬ್ಬರಿಸುವುದು ಪಕ್ಕಾ ಎನ್ನುವನ್ನು ಸಾರಿದೆ.

ADVERTISEMENT

ಚಿತ್ರದಲ್ಲಿ ಸಂಜಯ್‌ ದತ್‌, ರವೀನಾ ಟಂಡನ್‌ ಸೇರಿದಂತೆ ಹಲವು ಪ್ರಮುಖ ನಟರು ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ.ಈ ವರ್ಷ ಜನವರಿ 7ರಂದು ಚಿತ್ರದ ಯೂನಿವರ್ಸಲ್‌ ಟೀಸರ್‌ ಬಿಡುಗಡೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.