ADVERTISEMENT

₹ 1,200 ಕೋಟಿ ತಲುಪಿದ ಕೆಜಿಎಫ್‌–2 ಗಳಿಕೆ: ಹೊಸ ದಾಖಲೆ ಬರೆದ ರಾ ‘ಕಿಂಗ್‌’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 9:48 IST
Last Updated 18 ಮೇ 2022, 9:48 IST
   

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್‌–2 ಚಿತ್ರದ ಗಳಿಕೆಯು ₹ 1,200 ಕೋಟಿ ತಲುಪಿದೆ ಎಂದು ಸಿನಿಮಾ ಕಲೆಕ್ಷನ್‌ ವಿಶ್ಲೇಷಕ ರಮೇಶ್‌ ಬಾಲಾ ಟ್ವೀಟ್ ಮಾಡಿದ್ದಾರೆ.

ಅವರ ಪ್ರಕಾರ, ಕೆಜಿಎಫ್‌–2 ಚಿತ್ರವು ಭಾರತವೊಂದರಲ್ಲೇ ₹ 1,000 ಕೋಟಿ ಗಳಿಸುವಲ್ಲಿ ಸಫಲವಾಗಿದೆ.

ಅಮೀರ್ ಖಾನ್ ದಂಗಲ್‌ ಹಾಗೂ ಪ್ರಭಾಸ್‌ ಅಭಿನಯದ ಬಾಹುಬಲಿ–2 ಚಿತ್ರದ ನಂತರ ₹ 1,200 ಕೋಟಿ ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್‌–2 ಪಾತ್ರವಾಗಿದೆ.

ADVERTISEMENT

ಸಾವಿರ ಕೋಟಿ ಕ್ಲಬ್‌ನಲ್ಲಿ ದಂಗಲ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದೀಗ ಕನ್ನಡದ ʼಕೆಜಿಎಫ್-2ʼ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.