‘ಕೆಜಿಎಫ್ ಚಾಪ್ಟರ್ -2’ನಲ್ಲಿ ಕಾಣಿಸಿಕೊಳ್ಳಲು ‘ಅಧೀರ’ ಭರ್ಜರಿಯಾಗಿ ಸಜ್ಜಾಗಿದ್ದಾನೆ.
ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಈ ಚಿತ್ರದಲ್ಲಿ ಅಧೀರನ ಪಾತ್ರ. ಅದೇ ಹಳೆಯ ಸ್ಟೈಲ್, ಕಟ್ಟುಮಸ್ತು ಲುಕ್ನೊಂದಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ 'ಅಧೀರ' ಪಾತ್ರಕ್ಕೆ ಸಜ್ಜಾಗುತ್ತಿದ್ದೇನೆ ಎಂದು ಫೋಟೊ ಟ್ವೀಟಿಸಿದ್ದಾರೆ.
ಕಪ್ಪು ಟೀಷರ್ಟ್, ಹಸಿರು-ಕಂದು ಮಿಶ್ರ ವರ್ಣದ ಜೀನ್ಸ್ ಪ್ಯಾಂಟ್, ತಂಪು ಕನ್ನಡಕ ಧರಿಸಿ ಕೈಕಟ್ಟಿ ನಿಂತಿರುವ ಫೋಟೋ ಇದು. ಅಭಿಮಾನಿಯೊಬ್ಬರು ಸಂಜಯ್ ದತ್ ಈಸ್ ಬ್ಯಾಕ್ (ಸಂಜಯ್ ದತ್ ಮತ್ತೆ ಹಿಂತಿರುಗಿದ್ದಾರೆ) ಎಂದು ಬರೆದುಕೊಂಡಿದ್ದಾರೆ.
ಕೇಶ ವಿನ್ಯಾಸಕ ಅಲೀಂ ಅವರು ಈ ಚಿತ್ರಕ್ಕಾಗಿ ದತ್ ಅವರ ಕೇಶ ವಿನ್ಯಾಸ ಮಾಡಿದ್ದಾರೆ. ಈ ಚಿತ್ರ ತಂಡದ ಜೊತೆ ಇರುವುದು ನನಗೂ ಖುಷಿ ತಂದಿದೆ ಎಂದು ದತ್ ಹೇಳಿದ್ದಾರೆ.
‘ಅಧೀರ’ನ ಕ್ರೂರತೆ ಚಿತ್ರದ ಈ ಭಾಗದಲ್ಲೂ ಮುಂದುವರಿಯುತ್ತದೆ ಎಂದು ಚಿತ್ರತಂಡ ಹರಿಯಬಿಟ್ಟಿರುವ ವಿಡಿಯೋದಲ್ಲಿ ಹೇಳಲಾಗಿದೆ.
ಯಶ್ ನಾಯಕ ನಟನಾಗಿರುವ ‘ಕೆಜಿಎಫ್ ಚಾಪ್ಟರ್2’ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಜನವರಿ ತಿಂಗಳ ಮಕರ ಸಂಕ್ರಾಂತಿ ವೇಳೆಗೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.