ADVERTISEMENT

ಬಾಲಿವುಡ್‌ಗೆ ಪದಾರ್ಪಣೆ ಮಾಡಲಿರುವ ಶ್ರೀದೇವಿ ಪುತ್ರಿ ಖುಷಿ ಕಪೂರ್‌ 

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 7:12 IST
Last Updated 26 ಫೆಬ್ರುವರಿ 2022, 7:12 IST
ಖುಷಿ ಕಪೂರ್‌ 
ಖುಷಿ ಕಪೂರ್‌    

ಬೋನಿ ಕಪೂರ್‌, ಶ್ರೀದೇವಿ ದಂಪತಿಯ ಎರಡನೇ ಮಗಳು ಖುಷಿ ಕಪೂರ್‌ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಈ ಬಗ್ಗೆ ಖುಷಿ ಕಪೂರ್‌ ತಂದೆ ಬೋನಿ ಕಪೂರ್‌ ಮಾಹಿತಿ ನೀಡಿದ್ದಾರೆ. ಖುಷಿಯ ಸಿನಿಮಾವನ್ನು ಬೋನಿ ಕಪೂರ್‌ ನಿರ್ಮಾಣ ಮಾಡುವುದು ಬಹುತೇಕ ಖಚಿತವಾಗಿದೆ. ಇದೇ ಸಿನಿಮಾದಲ್ಲಿ ಶಾರೂಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌, ಅಮಿತಾಭ್‌ ಮೊಮ್ಮಗ ಅಗಸ್ತ್ಯಾ ನಂದಾ ಕೂಡ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಈ ಸಿನಿಮಾವನ್ನು ಜೋಯಾ ಅಖ್ತರ್‌ ನಿರ್ದೇಶನ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ.

ಪುತ್ರಿಯ ನಟನೆ ಬಗ್ಗೆ ಶಾರೂಖ್‌ ಖಾನ್ ಹಾಗೂ ಅಗಸ್ತ್ಯಾ ನಟನೆ ಬಗ್ಗೆ ಅಮಿತಾಭ್‌ ಕುಟುಂಬದವರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದಾಗ್ಯೂ ಅಗಸ್ತ್ಯಾ ಮತ್ತು ಸುಹಾನಾ ಪದೇ ಪದೇ ಜೋಯಾ ಅಖ್ತರ್‌ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಸಿನಿಮಾ ಮಾಡುವುದು ಅಧಿಕೃತ ಎಂದು ಜೋಯಾ ಅಖ್ತರ್‌ ಆಪ್ತರು ಖಚಿತಪಡಿಸಿದ್ದಾರೆ.

ADVERTISEMENT

ಒಂದೇ ವೇಳೆ ಸುಹಾನಾ, ಅಗಸ್ತ್ಯಾ ಈ ಸಿನಿಮಾದಿಂದ ದೂರ ಸರಿದರೂ ಖುಷಿಯ ಸಿನಿಮಾ ಮಾಡುವುದು ಖಚಿತ ಎಂದು ಬೋನಿ ಕಪೂರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೋನಿ​ ಕಪೂರ್‌ ಕಚೇರಿ ಮೂಲಗಳ ಪ್ರಕಾರ, ಏಪ್ರಿಲ್​ನಲ್ಲಿಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಬಾಲಿವುಡ್​ನಲ್ಲಿ ಯಶಸ್ವಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬೋನಿ ಕಪೂರ್ ಅವರ ಹಿರಿಯ ಮಗ ಅರ್ಜುನ್ ಕಪೂರ್​, ಪುತ್ರಿ ಜಾನ್ವಿ ಕಪೂರ್​ ಈಗಾಗಲೇ ಸ್ಟಾರ್​ ಆಗಿದ್ದಾರೆ. ಈಗ ಖುಷಿ ಕಪೂರ್‌ ಕೂಡ ಸಿನಿ ಪಯಣ ಆರಂಭಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.