ADVERTISEMENT

ಗಲ್ಫ್‌ ಕನ್ನಡಿಗರ ಜತೆ ಸುದೀಪ್‌ ಮಾತುಕತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:56 IST
Last Updated 17 ಜೂನ್ 2020, 13:56 IST
ಸುದೀಪ್‌ ಸಂವಾದದ ಪೋಸ್ಟರ್‌
ಸುದೀಪ್‌ ಸಂವಾದದ ಪೋಸ್ಟರ್‌   

ಸಾಗರೋತ್ತರ ಕನ್ನಡಿಗ ಅಭಿಮಾನಿಗಳ ಜತೆಗೆಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿಸುದೀಪ್‌ ನಿರಂತರವಾಗಿಸಂವಾದ ನಡೆಸಲು ಆರಂಭಿಸಿದ್ದಾರೆ. ಜೂ.13ರಂದುಯುನೈಟೆಡ್‌ ಕಿಂಗ್‌ಡಮ್‌ನಲ್ಲಿರುವ ಕನ್ನಡ ಬಳಗ ಆಯೋಜಿಸಿದ್ದ ‘ನನ್ನ ಪಯಣ’ ಎಂಬ ಆನ್‌ಲೈನ್‌ ವರ್ಚ್ಯುವಲ್‌ ಮೀಟಿಂಗ್‌ನಲ್ಲಿಸುದೀಪ್‌ ಅಭಿಮಾನಿಗಳೊಂದಿಗೆ ಮುಕ್ತಮಾತುಕತೆ ನಡೆಸಿದ್ದರು.ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರ ಸೇರಿ ಸುಮಾರು 18 ರಾಷ್ಟ್ರಗಳಲ್ಲಿನ ಕನ್ನಡಿಗರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಭಿಮಾನಿಗಳು ತೋರಿಸಿದ ಪ್ರೀತಿ, ಮೆಚ್ಚುಗೆ, ಅಭಿಮಾನದ ಮಾತುಗಳಿಗೆ ಕಿಚ್ಚ ಫಿದಾ ಆಗಿದ್ದಾರಂತೆ.

ಇದೇ ಶುಕ್ರವಾರ (ಜೂ.19ರಂದು) ಗಲ್ಫ್‌ ಕನ್ನಡಿಗರ ಜೊತೆ ಕಿಚ್ಚನ ಮಾತುಕತೆ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಕುವೈತ್‌, ಕತಾರ್‌, ಬರೈನ್‌, ಸೌದಿ ಅರೆಬಿಯಾ, ಸಂಜೆ 6 ಗಂಟೆಗೆ ದುಬೈ, ಒಮನ್‌, ಯುಎಇಯಲ್ಲಿರುವ ಅಭಿಮಾನಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಲಿದ್ದಾರೆ.ಹೊರ ರಾಷ್ಟ್ರಗಳಲ್ಲಿರುವ ಅಭಿಮಾನಿಗಳೊಂದಿಗೆ (ಭಾರತೀಯ ಕಾಲಮಾನ ಸಂಜೆ 7.30) ಕಿಚ್ಚ ತಮ್ಮ ಮನದ ಮಾತು ಬಿಚ್ಚಿಡಲಿದ್ದಾರೆ.

ಹಾಗೆಯೇ ಕಿಚ್ಚ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಫ್ಯಾಂಟಮ್’ ಶೂಟಿಂಗ್‌ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿಜುಲೈ 1ರಿಂದ ಶುರುವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಶೂಟಿಂಗ್‌ ಶುರುಮಾಡಲು ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಸುದೀಪ್‌ ಅವರ ಮ್ಯಾನೇಜರ್‌ ಮತ್ತುಫ್ಯಾಂಟಮ್‌ ಚಿತ್ರದ ನಿರ್ಮಾಪಕ ಜಾಕ್‌ ಮಂಜು.

ADVERTISEMENT

‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಚಿತ್ರೀಕರಣೋತ್ತರದ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಈ ಚಿತ್ರದ ಒಂದು ಹಾಡನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೊಂದು ಅದ್ಧೂರಿ ಹಾಡನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆಯೂ ಇದೆ ಎನ್ನುವ ಮಾತು ಸೇರಿಸಿದರು ಮಂಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.