ADVERTISEMENT

ಜೂನಿಯರ್ ಸಿನಿಮಾ: ಆ ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಭಾರಿ ಪರಿಶ್ರಮ– ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2025, 11:21 IST
Last Updated 22 ಜುಲೈ 2025, 11:21 IST
<div class="paragraphs"><p>ಜೂನಿಯರ್ ಸಿನಿಮಾ: ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಪರಿಶ್ರಮ– ವಿಡಿಯೊ</p></div>

ಜೂನಿಯರ್ ಸಿನಿಮಾ: ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಪರಿಶ್ರಮ– ವಿಡಿಯೊ

   

ಬೆಂಗಳೂರು: ಕಳೆದ ವಾರ ಜುಲೈ 18 ರಂದು ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ಚೊಚ್ಚಲ ಸಿನಿಮಾ ‘ಜೂನಿಯರ್’ ಕೌಟುಂಬಿಕ ಸಿನಿಮಾಗಳ ಪ್ರಿಯರ ಗಮನ ಸೆಳೆದಿದೆ.

ಸಿನಿಮಾದಲ್ಲಿ ಕಿರೀಟಿ ಅವರ ನೃತ್ಯ ಹಾಗೂ ಸ್ಟಂಟ್ ಬಗ್ಗೆ ಮೆಚ್ಚುಗೆ ಮಾತುಗಳು ಹಲವೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಅವರ ತಂದೆ ಜನಾರ್ಧನ ರೆಡ್ಡಿ ಅವರು, ‘ಮಗ ಪರಿಶ್ರಮ ವಹಿಸಿ ಸಾಹಸ ದೃಶ್ಯಗಳನ್ನು ಪರಿಪೂರ್ಣವಾಗಿ ಮಾಡಿದ್ದರ’ ಮೇಕಿಂಗ್ ವಿಡಿಯೊ ಹಂಚಿಕೊಂಡಿದ್ದಾರೆ.

ADVERTISEMENT

ಈ ವಿಡಿಯೊಕ್ಕೆ ಅನೇಕರು ಪ್ರತಿಕ್ರಿಯಿಸಿ ಕಿರೀಟಿ ನಿಜವಾಗಿಯೂ ಪರಿಶ್ರಮ ಪಟ್ಟಿರುವುದು ಇದರಲ್ಲಿ ಕಾಣುತ್ತದೆ. ಉತ್ತಮ ಭವಿಷ್ಯವಿದೆ ಎಂಬ ಅಭಿಪ್ರಾಯಗಳನ್ನು ಬಹುತೇಕರು ಹಂಚಿಕೊಂಡಿದ್ದಾರೆ.

ಪುತ್ರ ಕಿರೀಟಿಯ "ಜೂನಿಯರ್" ಚಿತ್ರದಲ್ಲಿನ ಎಲ್ಲರ ಮೆಚ್ಚುಗೆ ಪಡೆದ ಆಕ್ಷನ್ ಸ್ಟಂಟ್ ದೃಶ್ಯದ ತೆರೆಯ ಹಿಂದಿನ ಪರಿಶ್ರಮ ಎಂದು ಗಾಲಿ ಜನಾರ್ದನ ರೆಡ್ದಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಿರೀಟಿಯೂ ಈ ವಿಡಿಯೊವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಗಮನ ಸೆಳೆದಿದೆ.

ಕನ್ನಡದಲ್ಲಿ ಮಾಯಾಬಜಾರ್ ಸಿನಿಮಾ ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ಜೂನಿಯರ್‌ ನಿರ್ದೇಶಿಸಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿದ್ದು ಗಳಿಕೆಯಲ್ಲಿ ನಿಧಾನವಾಗಿ ಪ್ರಗತಿ ಕಾಣುತ್ತಿದೆ ಎಂದು ವರದಿಯಾಗಿದೆ. ಸುಮಾರು ₹80 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗಿದೆ.

ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕೆ.ಕೆ. ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರ ತೆರೆಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.