ADVERTISEMENT

KL ರಾಹುಲ್ - ಆಥಿಯಾ ಶೆಟ್ಟಿ ಮದುವೆ ಎಲ್ಲಿ ಎಂಬುದನ್ನು ಬಾಯ್ಬಿಟ್ಟ ಸುನೀಲ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2022, 14:45 IST
Last Updated 6 ಸೆಪ್ಟೆಂಬರ್ 2022, 14:45 IST
KL ರಾಹುಲ್ - ಆಥಿಯಾ ಶೆಟ್ಟಿ
KL ರಾಹುಲ್ - ಆಥಿಯಾ ಶೆಟ್ಟಿ    

ಬೆಂಗಳೂರು: ಕರ್ನಾಟಕ ಮೂಲದ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿಗೆ ಅಂತೂ ಕಂಕಣಭಾಗ್ಯ ಕೂಡಿ ಬಂದಿದೆ.

ಸ್ವತಃ ಈ ವಿಷಯವನ್ನು ಆಥಿಯಾ ಶೆಟ್ಟಿ ತಂದೆ, ಮಂಗಳೂರು ಮೂಲದ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಖಚಿತಪಡಿಸಿದ್ದಾರೆ.

‘ಶೀಘ್ರದಲ್ಲೇ ರಾಹುಲ್ ಹಾಗೂ ಆಥಿಯಾ ಅವರ ಮದುವೆ ಪುಣೆಯ ಲೋನವಾಲಾ ಬಳಿಯ ಕಂಡಾಲಾದ ನಮ್ಮ ಮನೆಯಲ್ಲಿ ನಡೆಯಲಿದೆ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ’ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಕಂಡಾಲಾ ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಸುಂದರ ‌ಪ್ರವಾಸಿ ತಾಣವಾಗಿದೆ. ಇಲ್ಲಿ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ಹಾಗೂ ಮನೆ ಹೊಂದಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್ ರಾಹುಲ್ ಅವರು ಈ ವಿಷಯವನ್ನು ದೃಢಪಡಿಸಿಲ್ಲ. ಅವರು ಸದ್ಯ ಏಷ್ಯಾ ಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಹೀಗಾಗಿ ಸುನೀಲ್ ಶೆಟ್ಟಿ ಅವರು ಮದುವೆಯ ನಿಶ್ಚಿತ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಇನ್ನು ಬಾಲಿವುಡ್‌ನಲ್ಲಿ ತೊಡಗಿಸಿಕೊಂಡಿರುವ ಆಥಿಯಾ ಶೆಟ್ಟಿ ‘ಹಿರೋ’ ಸೇರಿದಂತೆ ಕೆಲ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.