ADVERTISEMENT

ತೆಲುಗು ಸಿನಿಮಾ ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹15 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:29 IST
Last Updated 23 ಡಿಸೆಂಬರ್ 2019, 14:29 IST
   

ತೆಲುಗು ಸಿನಿಮಾ ಇಂಡಸ್ಟಿಯಲ್ಲಿ ಎಸ್‌.ಎಸ್‌. ರಾಜಮೌಳಿ ಅವರದು ಜನಪ್ರಿಯ ಹೆಸರು. ಹಾಗೇ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ನಿರ್ದೇಶಕರ ಸಾಲಿನಲ್ಲಿ ಅವರ ಹೆಸರು ಪ್ರಥಮ ಸ್ಥಾನದಲ್ಲಿದೆ.

ರಾಜಮೌಳಿ ಅವರು ಸಂಭಾವನೆ ಜೊತೆಗೆ ಸಿನಿಮಾದ ಲಾಭದಲ್ಲಿ ತಮ್ಮ ಷೇರ್‌ ಕೂಡ ಪಡೆಯುತ್ತಾರೆ. ಇವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ₹ 30ರಿಂದ ₹ 50 ಕೋಟಿ. ‘ಬಾಹುಬಲಿ’ ಚಿತ್ರಕ್ಕೆ ಅವರು ₹50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೆ. ಈಗ ‘ಆರ್‌ಆರ್‌ಆರ್‌’ ಚಿತ್ರಕ್ಕೆ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ.

ರಾಜಮೌಳಿ ಬಳಿಕ ತೆಲುಗು ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮತ್ತೊಬ್ಬ ನಿರ್ದೇಶಕ ಕೊರಟಾಲ ಶಿವ.

ADVERTISEMENT

ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಮುಂದಿನ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ₹ 15 ಕೋಟಿ. ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಎರಡನೇ ನಿರ್ದೇಶಕ ಇವರೇ.

ಇವರು ನಿರ್ದೇಶನದ ಎಲ್ಲಾ ಚಿತ್ರಗಳು ಒಂದರ ಹಿಂದೆ ಒಂದು ಹಿಟ್‌ ಗಳಿಸಿರುವುದೇ ಇದಕ್ಕೆ ಕಾರಣ. ಅವರ ಮೊದಲ ಸಿನಿಮಾ ‘ಮಿರ್ಚಿ’ಯಿಂದ ‘ಶ್ರೀಮಂತುಡು’, ‘ಜನತಾ ಗ್ಯಾರೇಜ್‌’, ‘ಭರತ್‌ ಅನೆ ನೇನು’ ಸಿನಿಮಾಗಳು ಬಾಕ್ಸ್‌ ಆಫೀಸಿನಲ್ಲಿ ಗೆಲುವು ಸಾಧಿಸಿತ್ತು. ಈ ಎಲ್ಲಾ ಕಾರಣಗಳಿಂದ ಅವರ ಸಂಭಾವನೆಯೂ ಹೆಚ್ಚಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.