ADVERTISEMENT

‘ಶುಗರ್ ಫ್ಯಾಕ್ಟರಿ’ಯಲ್ಲಿ ಕೃಷ್ಣ– ಸೋನಲ್‌ ಡ್ಯುಯೆಟ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 8:30 IST
Last Updated 9 ನವೆಂಬರ್ 2020, 8:30 IST
ಸೋನಲ್‌ ಮೊಂತೆರೊ
ಸೋನಲ್‌ ಮೊಂತೆರೊ   

‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರ ಸೆಟ್ಟೇರಿದೆ. ಈ ಚಿತ್ರದ ಶೀರ್ಷಿಕೆ ‘ಶುಗರ್ ಫ್ಯಾಕ್ಟರಿ’. ಈ ಫ್ಯಾಕ್ಟರಿಗೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ ಕರಾವಳಿಯ ‌ಚೆಂದುಳ್ಳಿ ಚೆಲುವೆ ಸೋನಲ್‌ ಮೊಂತೆರೊ.

ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ‘ಮನಸಾಲಜಿ’ ಚಿತ್ರ ನಿರ್ದೇಶಿಸಿದ್ದ ದೀಪಕ್ ಅರಸ್‌ಗೆ ಇದು ಎರಡನೇ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಇವರೇ ಹೆಣೆದಿದ್ದಾರೆ. ಸಂಭಾಷಣೆ ‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್ ಅವರದು.

ಡಾರ್ಲಿಂಗ್ ಕೃಷ್ಣ ಈ ಚಿತ್ರದಲ್ಲಿ ಮೂವರು ನಾಯಕಿಯರೊಂದಿಗೆ ಡ್ಯುಯೆಟ್‌ ಹಾಡಲಿದ್ದಾರೆ. ಸೋನಲ್ ಮೊದಲ ನಾಯಕಿಯಾಗಿದ್ದರೆ, ಇನ್ನಿಬ್ಬರು ನಾಯಕಿಯರು ಮತ್ತು ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ADVERTISEMENT

ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಗೋವಾ, ಮೈಸೂರು ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್. ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಸಂತೋಷ್ ರೈ ಪಾತಾಜೆ, ಕಬೀರ್ ರಫಿ ಅವರ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.