ADVERTISEMENT

ನಟ ಸೂಪರ್‌ಸ್ಟಾರ್ ಸೂರ್ಯಾಗೆ ಜೋಡಿಯಾದ ಕ್ಯೂಟ್ ಬೆಡಗಿ ಕೃತಿ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 7:15 IST
Last Updated 30 ಮಾರ್ಚ್ 2022, 7:15 IST
ಕೃತಿ ಶೆಟ್ಟಿ, ಸೂರ್ಯಾ
ಕೃತಿ ಶೆಟ್ಟಿ, ಸೂರ್ಯಾ   

ಬೆಂಗಳೂರು: ಟಾಲಿವುಡ್‌ನಲ್ಲಿ ಉಪ್ಪೇನಾ ಸಿನಿಮಾ ಮೂಲಕ ಖ್ಯಾತಿಗೆ ಬಂದ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿಗೆ ಇದೀಗ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ.

ನಾಗಾರ್ಜುನ್ ಹಾಗೂ ನಾಗಚೈತನ್ಯ ಅವರ ಬಂಗಾರಾಜು ಸಿನಿಮಾದಲ್ಲಿ ಮಿಂಚಿದ ನಂತರ ಕೃತಿ ಶೆಟ್ಟಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯಾಗೆ ಜೋಡಿಯಾಗುತ್ತಿದ್ದಾರೆ.

ಹೌದು, ತಮಿಳಿನ ಖ್ಯಾತ ನಿರ್ದೇಶಕ ಬಾಲಾ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೂರ್ಯಾ ಒಡೆತನದ 2ಡಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ವಿಚಾರ ಹಂಚಿಕೊಂಡಿದೆ.

ADVERTISEMENT

ಬಾಲಾ ಹಾಗೂ ನಟ ಸೂರ್ಯಾ ಅವರು ಸುಮಾರು 21 ವರ್ಷಗಳ ನಂತರ ಜೊತೆಯಾಗುತ್ತಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಹೆಸರು ಅಧಿಕೃತವಾಗಿಲ್ಲ. ಬದಲಿಗೆ ‘ಸೂರ್ಯಾ 41’ ಎಂದು ತಾತ್ಕಾಲಿಕವಾಗಿ ಶುರು ಮಾಡಲಾಗಿದೆ.

ಸೂರ್ಯಾ ಅವರ ಹೊಸ ಚಿತ್ರದ ಜೊತೆ ಇನ್ನೂ ಮೂರ್ನಾಲ್ಕು ಚಿತ್ರಗಳು ಕೃತಿ ಶೆಟ್ಟಿ ಕೈಯಲ್ಲಿದೆ. ಉಪ್ಪೇನಾದಲ್ಲಿ ಅವರ ಬೇಬಮ್ಮ ಪಾತ್ರ ಅವರಿಗೆ ಪ್ರಸಿದ್ಧಿ ತಂದು ಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.