ಮುಂಬೈ: ನಟಿ ಕೃತಿಕಾ ಕಮ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಾಗಳಿಗೆ ಇದೀಗ ಪುಷ್ಠಿ ಸಿಕ್ಕಿದೆ.
ಕಳೆದ ಎರಡು ತಿಂಗಳಿನಿಂದ ಜನಪ್ರಿಯ ನಿರೂಪಕ ಗೌರವ್ ಕಪೂರ್ ಅವರೊಂದಿಗೆ ಕೃತಿಕಾ ಕಮ್ರಾ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅವರು ಕಪೂರ್ ಜತೆಗಿನ ಆತ್ಮೀಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳ ಅಡಿ ಬರಹದಲ್ಲಿ ಬ್ರೇಕ್ ಫಾಸ್ಟ್ ವಿತ್... ಎಂದು ಬರೆದುಕೊಂಡಿದ್ದಾರೆ. ರಿಲೇಷನ್‌ಶಿಪ್‌ನಲ್ಲಿ ಇರುವ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಗೌರವ್ ಕಪೂರ್ ಅವರು ಕ್ರಿಕೆಟ್ ಐಕಾನ್ ಜತೆಗಿನ ಸಂಭಾಷಣೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಶೋ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.
ಕಮ್ರಾ ಪೋಸ್ಟ್‌ಗಳಿಗೆ ಅವರ ಅನುಯಾಯಿಗಳು ಸಂತಸ ವ್ಯಕ್ತಪಡಿಸಿದರೆ, ಇದರಲ್ಲಿ ಹೊಸತೇನಿಲ್ಲ ಗೊತ್ತಿರುವ ವಿಷಯವೇ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಆದರೆ ತಮ್ಮ ಸಂಬಂಧ ಕುರಿತು ಕೃತಿಕಾ ಅಥವಾ ಕಪೂರ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.