ADVERTISEMENT

ಕಿಸ್‌ ಕೊಟ್ಟು, ತೊಡೆ ಸವರಿ ‘ಲೈಂಗಿಕ ಕಿರುಕುಳ‌‘ ಕೊಟ್ಟಿದ್ದ ಅಂಕಲ್‌ –ನಟಿ ಕುಬ್ರಾ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 10:52 IST
Last Updated 6 ಜೂನ್ 2022, 10:52 IST
ಕುಬ್ರಾ ಸೇಠ್‌
ಕುಬ್ರಾ ಸೇಠ್‌   

ಕನ್ನಡದ ಕಿರುತೆರೆ ಹಾಗೂ ವೆಬ್‌ಸಿರಿಸ್‌ಗಳಲ್ಲಿ ಮಿಂಚುತ್ತಿರುವ ನಟಿ ಕುಬ್ರಾ ಸೇಠ್‌ ಹೊಸ ಪುಸ್ತಕ ಬರೆದಿದ್ದು, ಅದರಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬರೆದು ಕೊಂಡಿದ್ದಾರೆ.

ಕುಬ್ರಾ ಅವರು ‘ಓಪನ್ ಬುಕ್‌‘ ಎಂಬ ಪುಸ್ತಕ ಬರೆದಿದ್ದಾರೆ. ಇದರಲ್ಲಿ ತಮ್ಮ ಬಾಲ್ಯದ ದಿನಗಳು ಹಾಗೂ ಹದಿಹರೆಯದ ವಯಸ್ಸಿನಲ್ಲಿ ನಡೆದ ಘಟನಾವಳಿಗಳ ನೆನಪುಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರು ನಟಿ ಮಾತ್ರವಲ್ಲದೇ ಬರಹಗಾರ್ತಿಯು ಹೌದು.

ನಾನು 17 ವರ್ಷದವಳಿದ್ದಾಗ,ನಮ್ಮ ಕುಟುಂಬಕ್ಕೆ ಪರಿಚಿತವಾಗಿದ್ದಅಂಕಲ್‌ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದರು. ಅವರು ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದರು ಎಂದು ಕುಬ್ರಾ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದ ಅಂಕಲ್‌ ಪದೇ ಪದೇ ನಮ್ಮ ಮನೆಗೆ ಬರುತ್ತಿದ್ದರು. ನಾವು ಕೂಡ ಅವರ ರೆಸ್ಟೋರೆಂಟ್‌ಗೆ ಹೋಗುತ್ತಿದ್ದೇವು. ಅವರು ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರು. ಕುಟುಂಬಕ್ಕೆ ಆಪ್ತರಾಗಿದ್ದರು.

ಅವರು ನನಗೆ ಅಂಕಲ್‌ ಎಂದು ಕರೆಯ ಬೇಡವೆಂದುಹೇಳುತ್ತಿದ್ದರು. ಮನೆಗೆ ಬಂದಾಗ ನನ್ನ ಕುತ್ತಿಗೆಗೆ ಮುತ್ತು ಕೊಡುತ್ತಿದ್ದರು. ಕೆಲವು ಸಲ ತುಟಿಗಳಿಗೂಮುತ್ತು ಕೊಟ್ಟಿದ್ದರು. ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ತೊಡೆ ಸವರಿಲೈಂಗಿಕ ಕಿರುಕುಳ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು.ಅವರು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರಿಂದ ನಾನು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆ. ಒಂದು ದಿನ ನನ್ನ ಹೊಟೇಲ್‌ಗೆ ಕರೆದುಕೊಂಡು ಹೋಗಿ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದರು. ಆಗ ನಾನು ಶಾಕ್‌ ಆಗಿದ್ದೆ, ಯಾರ ಬಳಿಯೂ ಹೇಳಿಕೊಳ್ಳದಸ್ಥಿತಿಯಲ್ಲಿ ನಾನಿದ್ದೆ ಎಂದು ಕುಬ್ರಾ ಹೇಳಿದ್ದಾರೆ.

ಕುಬ್ರಾ ಅವರು ವೆಬ್‌ಸಿರಿಸ್‌ಗಳು ಸೇರಿದಂತೆ ಕಿರುತೆರೆ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕುಬ್ರಾ ಅವರು ನಟ ಡ್ಯಾನಿಶ್‌ ಸೇಠ್‌ ಅವರ ಸಹೋದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.