ADVERTISEMENT

ಬೈರಾಗಿ ಹಾಡು ಕೇಳಿ: ‘ರಿದಂ ಆಫ್‌ ಶಿವಪ್ಪ‘ ಹಾಡಿಗೆ ದನಿಯಾದ ಶಿವಣ್ಣ, ಶರಣ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 10:47 IST
Last Updated 2 ಜೂನ್ 2022, 10:47 IST
ಬೈರಾಗಿ ಪೋಸ್ಟರ್‌
ಬೈರಾಗಿ ಪೋಸ್ಟರ್‌   

ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ‘. ಈ ಚಿತ್ರದ ಲಿರಿಕಲ್‌ ಹಾಡು ಬಿಡುಗಡೆಯಾಗಿದ್ದು ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಗುರುವಾರ ‘ರಿದಂ ಆಫ್‌ ಶಿವಪ್ಪ‘ ಹಾಡು ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿರುವುದು ವಿಶೇಷ.

ರಿದಂ ಆಫ್‌ ಶಿವಪ್ಪ ಹಾಡನ್ನು ಶಿವರಾಜ್‌ ಕುಮಾರ್‌ ಹಾಗೂ ನಟ ಶರಣ್‌ ಹಾಡಿರುವುದು ವಿಶೇಷ. ‘ಬೈರಾಗಿ’ ಸಿನಿಮಾವನ್ನು ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ.ಅನೂಪ್ ಸಂಗೀತ ನೀಡಿದ್ದಾರೆ.

ADVERTISEMENT

‘ಟಗರು’ ಸಿನಿಮಾ ಯಶಸ್ಸಿನ ಬಳಿಕ ಶಿವರಾಜ್‌ಕುಮಾರ್‌ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೇಲೆ ಜನರ ನಿರೀಕ್ಷೆ ಬಹಳಷ್ಟಿದೆ. ಅಂಜಲಿ ಈ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.