ADVERTISEMENT

'ಬೆಸ್ಟ್ ಫ್ರೆಂಡ್' ಕರಣ್ ಜೋಹರ್‌ಗೆ ಜೈಲುವಾಸದ ಶಿಕ್ಷೆ: ಇದು ಕಂಗನಾ ಬಯಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2022, 9:01 IST
Last Updated 17 ಫೆಬ್ರುವರಿ 2022, 9:01 IST
ಕಂಗನಾ ರನೌತ್‌
ಕಂಗನಾ ರನೌತ್‌   

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ‘ಲಾಕ್‌ ಅಪ್‌’ ರಿಯಾಲಿಟಿ ಶೋನ ಟ್ರೈಲರ್ ಬುಧವಾರ ದೆಹಲಿಯಲ್ಲಿ ಬಿಡುಗಡೆಯಾಗಿದೆ.

ಈ ಶೋನಲ್ಲಿ 16 ಮಂದಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ.

ಕಂಗನಾ ಅವರು ಈ ಶೋನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ನಿರೂಪಣೆಯನ್ನು ಮಾಡಲಿದ್ದಾರೆ.

ADVERTISEMENT

ಟ್ರೈಲರ್‌ ಬಿಡುಗಡೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಂಗನಾ ಮಾತನಾಡಿದರು. ಆ ವೇಳೆ, ‘ನೀವು ಯಾರನ್ನು ಜೈಲಿನಲ್ಲಿ ಬಂಧಿಸಿಡಲು ಬಯಸುತ್ತೀರಿ’ ಎಂದು ಕಂಗನಾ ಅವರಿಗೆ ಪ್ರಶ್ನಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನನ್ನ ಆತ್ಮೀಯ ಸ್ನೇಹಿತ ಕರಣ್ ಜೋಹರ್ ಅವರನ್ನು ಜೈಲಿನಲ್ಲಿ ಬಂಧಿಸಿ ಆತಿಥ್ಯ ನೀಡಲು ಬಯಸುತ್ತೇನೆ. ಅವರ ಜೊತೆಗೆ ನಾನು ಏಕ್ತಾ ಕಪೂರ್ ಅವರನ್ನೂ ಜೈಲಿಗೆ ಹಾಕಲು ಬಯಸುತ್ತೇನೆ’ ಎಂದಿದ್ದಾರೆ.

ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಶೋ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಒಟಿಟಿಗಳಲ್ಲಿ ಫೆಬ್ರುವರಿ 27ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.