ADVERTISEMENT

ಲೋಕಾ– ಚಾಪ್ಟರ್ 2 ಘೋಷಣೆ ಮಾಡಿದ ದುಲ್ಕರ್ ಸಲ್ಮಾನ್

ಮಿಚಲ್ ಆಗಿ ಟೊವಿನ್ ಥಾಮಸ್, ಚಾರ್ಲಿ ಆಗಿ ದುಲ್ಕರ್ ಸಲ್ಮಾನ್ ಕಾಣಿಸಿಕೊಂಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 7:51 IST
Last Updated 27 ಸೆಪ್ಟೆಂಬರ್ 2025, 7:51 IST
<div class="paragraphs"><p>ಲೋಕಾ– ಚಾಪ್ಟರ್ 2</p></div>

ಲೋಕಾ– ಚಾಪ್ಟರ್ 2

   

ಬೆಂಗಳೂರು: ಮಲಯಾಳಂನ ಸೂಪರ್ ಹಿರೋ ಸಿನಿಮಾ ಲೋಕಾ– ಚಾಪ್ಟರ್ 1 ಈ ವರ್ಷ ಸಿನಿಪ್ರೇಮಿಗಳ ಮನಸ್ಸು ಗೆದ್ದಿರುವುದಲ್ಲದೇ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ.

ಈ ಚಿತ್ರವನ್ನು ನಿರ್ಮಿಸಿರುವ ನಟ, ನಿರ್ಮಾಪಕ ದುಲ್ಕರ್ ಸಲ್ಮಾನ್ ಹಾಗೂ ಅವರ ತಂಡ ಇದೀಗ ಲೋಕಾ– ಚಾಪ್ಟರ್ 2 ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ADVERTISEMENT

ದುಲ್ಕರ್ ಸಲ್ಮಾನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಸಿನಿಮಾದ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ.

ಲೋಕಾ– ಚಾಪ್ಟರ್ 1 ಚಂದ್ರಾ ಎಂಬ ಸೂಪರ್ ಹಿರೋ ಪಾತ್ರದ ಬಗ್ಗೆ ಸೊಗಸಾಗಿ ಹೇಳಿತ್ತು. ಲೋಕಾ– ಚಾಪ್ಟರ್ 2 ನಲ್ಲಿ ಮಿಚಲ್ ಮತ್ತು ಚಾರ್ಲಿ ಎಂಬವರ ಕಥೆ ಹೇಳಲಾಗುತ್ತದೆ. ಚಂದ್ರಾ ಆಗಿ ಯುವ ನಟಿ ಕಲ್ಯಾಣಿ ಪ್ರಿಯದರ್ಶನ್ ಮಿಂಚಿದ್ದಾರೆ.

ಮಿಚಲ್ ಆಗಿ ಟೊವಿನ್ ಥಾಮಸ್, ಚಾರ್ಲಿ ಆಗಿ ದುಲ್ಕರ್ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.

ಡಾಮಿನಿಕ್‌ ಅರುಣ್‌ ನಿರ್ದೇಶನದ ಲೋಕಾ ಚಾಪ್ಟರ್ 1 ಸಿನಿಮಾವನ್ನು ನಟ ದುಲ್ಕರ್‌ ಸಲ್ಮಾನ್‌ ಅವರ ವೇಫರರ್‌ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ಸಿನಿಮಾ ಬೆಂಗಳೂರು ಸೇರಿದಂತೆ ಕೇರಳದಲ್ಲಿ ಹೌಸ್‌ಫುಲ್‌ ಪ್ರದರ್ಶನಗಳನ್ನು ಕಂಡಿತ್ತು.  ಕರ್ನಾಟಕದಲ್ಲಿ ನಟ ರಾಜ್‌ ಬಿ.ಶೆಟ್ಟಿ ಅವರ ಲೈಟರ್‌ ಬುದ್ಧ ಫಿಲ್ಮ್ಸ್‌ ವಿತರಣೆ ಮಾಡಿತ್ತು.

ಲೋಕಾ ಚಿತ್ರದ ಬಹುತೇಕ ದೃಶ್ಯಗಳನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿನ ಸಂಭಾಷಣೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಹಿಳೆಯರ ಕುರಿತು ಕೆಟ್ಟ ಭಾಷಾಪ್ರಯೋಗ ಮಾಡಲಾಗಿ, ವಿವಾದ ಹುಟ್ಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.