ಪ್ರೇಮಕಥೆಯನ್ನು ಹೊಂದಿರುವ ‘ಲವ್ ಮ್ಯಾಟ್ರು’ ಚಿತ್ರದ ‘ಏನೋ ಗೊತ್ತಿಲ್ಲ’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿರಾಟ್ ಬಿಲ್ವ ಚಿತ್ರವನ್ನು ನಿರ್ದೇಶಿಸಿರುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
‘ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿದ್ದು ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ. ಲವ್, ರೊಮ್ಯಾನ್ಸ್ ಜತೆಗೆ ಹಿತವಾದ ಪ್ರೇಮಗೀತೆಗಳನ್ನು ಹೊಂದಿರುವ ಚಿತ್ರ. ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ.ಎಂ.ಚೈತನ್ಯ ಅವರ ಸಿನಿಮಾಗಳೇ ನನಗೆ ಸ್ಫೂತಿ. ಈ ಹಿಂದೆ ‘ಕಡ್ಡಿಪುಡಿ’ ಚಿತ್ರದಲ್ಲಿ ನಟಿಸಿದ್ದೆ. ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡೂ ಜವಾಬ್ದಾರಿ ಹೊತ್ತಿದ್ದೇನೆ’ ಎಂದರು ವಿರಾಟ್.
ಹಾಡಿಗೆ ಶೇಡ್ರಾಕ್ ಸೋಲೋಮನ್ ಸಂಗೀತವಿದೆ. ಸೋನಲ್ ಚಿತ್ರದ ನಾಯಕಿ. ವಂದನಾ ಪ್ರಿಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಶ್ಮಿತಾ ಗೋಪಿನಾಥ್, ಅಚ್ಯುತ್‌ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ದೇವೇಂದ್ರ ಆರ್.ನಾಯ್ಡು ಮತ್ತು ಪರಮೇಶ್ ಸಿ.ಎಂ. ಛಾಯಾಚಿತ್ರಗ್ರಹಣ, ಸುರೇಶ್ ಅರಸ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.