ADVERTISEMENT

ಮಕ್ಕಳೊಂದಿಗೆ ಪ್ರಯಾಣಿಸುವುದು ಇಷ್ಟ: ಬಾಲಿವುಡ್‌ ನಟಿ ಚಾಹತ್ ಖನ್ನಾ 

ಐಎಎನ್ಎಸ್
Published 27 ಮಾರ್ಚ್ 2023, 11:43 IST
Last Updated 27 ಮಾರ್ಚ್ 2023, 11:43 IST
ನಟಿ ಚಾಹತ್ ಖನ್ನಾ (ಚಿತ್ರ ಕೃಪೆ): ಇನ್‌ಸ್ಟಾಗ್ರಾಮ್
ನಟಿ ಚಾಹತ್ ಖನ್ನಾ (ಚಿತ್ರ ಕೃಪೆ): ಇನ್‌ಸ್ಟಾಗ್ರಾಮ್   

ಮುಂಬೈ: ‘ಮಕ್ಕಳೊಂದಿಗೆ ಪ್ರಯಾಣಿಸುವುದನ್ನು ಇಷ್ಟ ಪಡುತ್ತೇನೆ. ಪ್ರಯಾಣವು ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಗೊಳ್ಳಲು ನೆರವಾಗುತ್ತದೆ’ ಎಂದು ಬಾಲಿವುಡ್‌ ನಟಿ ಚಾಹತ್ ಖನ್ನಾ ಹೇಳಿದ್ದಾರೆ.

ಈ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಪೋಷಕರು ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಪ್ರಯಾಣಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಷಕರು ತಮ್ಮ ವೃತ್ತಿ ಜೀವನದಲ್ಲೇ ಕಳೆದುಹೋಗಿರುತ್ತಾರೆ. ಪ್ರತಿದಿನ ತಮ್ಮ ಮಕ್ಕಳಿಗಾಗಿ ಮೀಸಲಿಡುವ ಸಮಯ ಸಾಕಾಗುವುದಿಲ್ಲ. ಮಕ್ಕಳೊಂದಿಗೆ ಪ್ರಯಾಣ ಮಾಡುವಾಗ, ಪೋಷಕರು ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು ಎಂದು ಚಾಹತ್ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಸ್ಥಳಗಳಿಗೆ ಪ್ರಯಾಣಿಸುವುದು ಹಾಗೂ ಹೊರ ಜಗತ್ತನ್ನು ಅರಿತುಕೊಳ್ಳುವುದು ಮುಖ್ಯ. ಇದರಿಂದ ನಮ್ಮ ಜೀವನದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ADVERTISEMENT

ಚಾಹತ್ ಖನ್ನಾ ತಮ್ಮ ಪುತ್ರಿಯರಾದ ಅಮೈರಾ ಮತ್ತು ಜೊಹೈರ್ ಅವರೊಂದಿಗೆ ಇತ್ತೀಚೆಗೆ ಜೈಪುರಕ್ಕೆ ಭೇಟಿ ನೀಡಿದ್ದರು. 'ಈ ಹಿಂದೆ ಒಂದೆರಡು ಬಾರಿ ರಾಜಸ್ಥಾನಕ್ಕೆ ಬಂದಿದ್ದರೂ, ಈ ಸಲದ ಭೇಟಿ ಬಹಳ ವಿಶೇಷವಾಗಿದೆ. ರಾಜಸ್ಥಾನದಲ್ಲಿರುವ ಆಲ್ಬರ್ಟ್ ಹಾಲ್ ವಸ್ತುಸಂಗ್ರಹಾಲಯವು ಅತ್ಯಂತ ಪುರಾತನವಾಗಿದೆ. ಐತಿಹಾಸಿಕ ಕಲಾಕೃತಿಗಳು ಮತ್ತು ಇನ್ನಿತರ ಸ್ಥಳಗಳನ್ನು ನೋಡಿ ಖುಷಿಯಾಯಿತು' ಎಂದು ಚಾಹತ್ ಹೇಳಿದ್ದಾರೆ.

'ಬಡೆ ಅಚ್ಚೆ ಲಗ್ತೆ ಹೇ' ಚಿತ್ರ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.