ADVERTISEMENT

Sonal Monterio: ‘ಲೋ ನವೀನ’ ಹಾಡು ಬಿಡುಗಡೆ ಮಾಡಿದ ಸೋನಲ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 22:30 IST
Last Updated 3 ಫೆಬ್ರುವರಿ 2026, 22:30 IST
ವರ್ಷ, ನವೀನ್‌ ಸಜ್ಜು 
ವರ್ಷ, ನವೀನ್‌ ಸಜ್ಜು    

ಗಾಯಕ ನವೀನ್‌ ಸಜ್ಜು ನಾಯಕರಾಗಿ ನಟಿಸಿರುವ ಮೊದಲ ಸಿನಿಮಾ ‘ಲೋ ನವೀನ’ದ ಎರಡನೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. 

ಜನಪದ ಶೈಲಿಯಲ್ಲಿರುವ ಚಿತ್ರದ ‘ಕೋಣಾಣೆ’ ಎಂಬ ಹಾಡನ್ನು ಚಿತ್ರತಂಡ ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ‘ಕೈ ತೊಳ್ಕೊಂಡ್‌ ಮುಟ್ಟಂಗವ್ಳೆ ನನ್‌ ಹುಡ್ಗಿ..’ ಎಂಬ ಹಾಡನ್ನು ನಟಿ ಸೋನಲ್‌ ಮೊಂತೆರೋ ಬಿಡುಗಡೆ ಮಾಡಿದ್ದಾರೆ. 

‘ಮೂಲತಃ ಮಳವಳ್ಳಿಯವನಾದ ನಾನು ಹಳ್ಳಿ ಪರಿಸರದಲ್ಲೇ ಬೆಳೆದವನು. ಗಾಯಕನಾಗಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ. ಗ್ರಾಮೀಣ ಸೊಗಡಿನ ಕಥೆ ಕೇಳಿ ಇಷ್ಟಪಟ್ಟ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಈ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಚಿತ್ರಕ್ಕೆ ನಾನೇ ಸಂಗೀತ ನೀಡಿದ್ದೇನೆ. ಈಗ ಬಿಡುಗಡೆಯಾಗಿರುವ ಹಾಡು ನಾಯಕಿಯನ್ನು ಪರಿಚಯಿಸುವ ಗೀತೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದಿದ್ದಾರೆ ನವೀನ್ ಸಜ್ಜು.

ADVERTISEMENT

ಸಿನಿಮಾವನ್ನು ಧನುರ್ಧಾರಿ ಪವನ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ರಿಷಿಕೇಶ್‌ ಛಾಯಾಚಿತ್ರಗ್ರಹಣ, ವಿನಾಯಕ್‌ ಆಚಾರ್ಯ ನೃತ್ಯ ನಿರ್ದೇಶನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.