ADVERTISEMENT

ಆಲಿಯಾಗೆ ಮಾಧುರಿ ಕಥಕ್‌ ಟೀಚರ್‌!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:06 IST
Last Updated 17 ಏಪ್ರಿಲ್ 2019, 14:06 IST
ಮಾಧುರಿ ದೀಕ್ಷಿತ್‌
ಮಾಧುರಿ ದೀಕ್ಷಿತ್‌   

ಅದ್ದೂರಿ ಚಿತ್ರಗಳ ಸರದಾರ ಕರಣ್‌ ಜೋಹರ್‌ ಅವರ ’ತಖ್ತ್‌‘ನಲ್ಲಿ ಕಥಕ್‌ ನೃತ್ಯ ಮಾಡಲು ಆಲಿಯಾ ಭಟ್‌ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಶಾಸ್ತ್ರೀಯವಾಗಿ ಕಥಕ್‌ ಕಲಿಯಲು ಅವರಿಗೆ ಪುರುಸೊತ್ತಿಲ್ಲ. ಹಾಗಾಗಿ ಕಥಕ್‌ನಲ್ಲಿ ಪಳಗಿದ ಕಲಾವಿದರಿಂದ ಕೆಲವು ಟಿಪ್ಸ್ ಪಡೆಯುವುದೇ ಸೂಕ್ತ ಎಂದು ತೀರ್ಮಾನಿಸಿದ್ದಾರೆ.

ಹೀಗೆ ಯೋಚಿಸುತ್ತಿರುವ ಆಲಿಯಾಗೆ ಥಟ್‌ ಅಂತ ನೆನಪಾಗಿದ್ದು ಯಾರು ಗೊತ್ತೇ? ಹಲವು ನೃತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭೆ, ಬಾಲಿವುಡ್‌ನ ದಂತದ ಗೊಂಬೆ ಮಾಧುರಿ ದೀಕ್ಷಿತ್‌!

ಹೌದು, ಕಥಕ್‌ ನೃತ್ಯದ ಕೆಲವು ಮಟ್ಟುಗಳನ್ನು ಮಾಧುರಿ ಮೇಡಂ ಬಳಿ ಹೇಳಿಸಿಕೊಳ್ಳಲು ಆಲಿಯಾ ತೀರ್ಮಾನಿಸಿದ್ದಾರೆ. ನೃತ್ಯದ ಮಾತು ಬಂದಾಗಲೆಲ್ಲಾ ತಮಗೆ ಮಾಧುರಿ ಮೇಡಂ ಮಾದರಿ ಎಂದು ಎಷ್ಟೋ ಸಲ ಹೇಳಿಕೊಂಡಿದ್ದಾರೆ ಆಲಿಯಾ. ಇದೀಗ, ಮಾಂತ್ರಿಕ ನೃತ್ಯಗಾರ್ತಿಯ ಬಳಿಯೇ ಕೆಲವೊಂದು ಪಾಠಗಳನ್ನೂ ಮಾರ್ಗದರ್ಶನಗಳನ್ನೂ ಪಡೆದು ‘ತಖ್ತ್‌‘ ಸೆಟ್‌ನಲ್ಲಿ ತಮ್ಮ ಡಾನ್ಸಿಂಗ್‌ ತಾಕತ್ತು ತೋರಿಸಬೇಕು ಎಂದು ತೀರ್ಮಾನಿಸಿದ್ದಾರೆ.

ADVERTISEMENT

‘ಕಳಂಕ್‌‘ನ ಘರ್‌ ಮೇರೆ ಪರ್‌ದೇಸಿಯಾ ಹಾಡಿನ ಚಿತ್ರೀಕರಣಕ್ಕೂ ಮೊದಲು ಮಾಧುರಿ ದೀಕ್ಷಿತ್‌ ಅವರೇ ಆಲಿಯಾಗೆ ಕೆಲವು ಹೆಜ್ಜೆಗಳನ್ನು ಹೇಳಿಕೊಟ್ಟಿದ್ದರಂತೆ. ಅಷ್ಟೇ ಅಲ್ಲ, ಮುಂದಿನ ಸಲ ಯಾವುದಾದರೂ ಚಿತ್ರಕ್ಕೆ ನೃತ್ಯದ ಅವಶ್ಯಕತೆ ಬಿದ್ದರೆ ಮೂರೇ ದಿನಗಳಲ್ಲಿ ಕಲಿಸಿಕೊಡುವುದಾಗಿ ವಾಗ್ದಾನವನ್ನೂ ಕೊಟ್ಟಿದ್ದಾರಂತೆ. ಹಾಗಾಗಿ ಮಾಧುರಿ ಆಹ್ವಾನದ ಮೇರೆಗೇಆಲಿಯಾ ತೀರ್ಮಾನ ತೆಗೆದುಕೊಂಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.