ADVERTISEMENT

ಮರೆಯಾದ ಮಹಾಭಾರತದ ‘ಇಂದ್ರ’: ನಟ ಸತೀಶ್ ಕೌಲ್ ನಿಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:56 IST
Last Updated 11 ಏಪ್ರಿಲ್ 2021, 13:56 IST
ಸತೀಶ್‌ ಕೌಲ್‌
ಸತೀಶ್‌ ಕೌಲ್‌   

ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರದಲ್ಲಿ ಅಭಿನಯಿಸಿದ ಖ್ಯಾತಿಯ ಹಿರಿಯ ನಟಸತೀಶ್ ಕೌಲ್ (74) ಶನಿವಾರ ಲುಧಿಯಾನದಲ್ಲಿ ಕೊರೋನಾ ಸೋಂಕಿನಿಂದ ಅನಾರೋಗ್ಯಕ್ಕೊಳಗಾಗಿ ನಿಧನರಾದರು.

70ರ ದಶಕದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಸುಮಾರು 300 ಪಂಜಾಬಿ ಹಾಗೂ ಹಿಂದಿ ಚಿತ್ರಗಳು ಹಾಗೂ ಟಿವಿ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ರಾಮ್ ಲಖನ್’, ‘ಪ್ಯಾರ್ ತೋಹ್ ಹೊನಾ ಹಿ ಥಾ’ ಮತ್ತು ‘ಆಂಟಿ ನಂ 1’ ಅವರು ನಟಿಸಿದ ಪ್ರಮುಖ ಹಿಂದಿ ಚಿತ್ರಗಳು. ‘ಮೌಲಾ ಜಾಟ್’, ‘ಸಾಸ್ಸಿ ಪುನ್ನು’, ‘ಇಷ್ಕ್ ನಿಮಾನಾ’, ‘ಸುಹಾಗ್ ಚೂಡಾ’ ಮತ್ತು ‘ಪಟೋಲಾ’ ಅವರು ನಟಿಸಿದ ಪ್ರಮುಖ ಹಿಂದಿ ಚಿತ್ರಗಳು. ದೂರದರ್ಶನದ ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರ ನಿರ್ವಹಿಸಿದ್ದರು. ಚಿಕ್ರಮ ಮತ್ತು ಬೇತಾಳ ಧಾರಾವಾಹಿಯಲ್ಲೂ ಅವರ ಪ್ರಮುಖ ಪಾತ್ರ ಗಮನ ಸೆಳೆದಿತ್ತು.

ADVERTISEMENT

ಸಂತಾಪ: ಕೌಲ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.