ADVERTISEMENT

ಪ್ರಿನ್ಸ್‌ ಜತೆ ಮಹೇಶ್‌ ಬಾಬು!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 9:14 IST
Last Updated 26 ಮಾರ್ಚ್ 2019, 9:14 IST
ಮಹೇಶ್‌ ಬಾಬು
ಮಹೇಶ್‌ ಬಾಬು   

ತೆಲುಗು ನಟ ‘ಪ್ರಿನ್ಸ್‌’ಮಹೇಶ್ ಬಾಬು ಹೈದರಾಬಾದ್‌ನಲ್ಲಿ ಈಚೆಗೆತಮ್ಮದೇ ಮೇಣದ ಪ್ರತಿಮೆಯನ್ನುಅನಾವರಣಗೊಳಿಸಿದರು. ಮೇಣದ ಪ್ರತಿಮೆ ಸಿಂಗಾಪುರದ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂ ಸೇರಲಿದೆ.

ಭಾರತೀಯ ಸಿನಿಮಾದ ದಿಗ್ಗಜರ ಮೇಣದ ಪ್ರತಿಮೆಗಳ ಸಾಲಿಗೆ ನನ್ನ ಪ್ರತಿಮೆಯೂ ಸೇರಲಿದೆ. ಇದು ನಿಜಕ್ಕೂ ಜೀವನದಲ್ಲಿ ಸಂದ ದೊಡ್ಡ ಗೌರವ ಎಂದು ಮಹೇಶ ಬಾಬು ಪ್ರತಿಕ್ರಿಯಿಸಿದ್ದಾರೆ.ಈ ಸಂದರ್ಭದಲ್ಲಿ ಅವರ ತಾರಾ ಪತ್ನಿ ನಮೃತಾ ಶಿರೋಡ್ಕರ್‌ ಮತ್ತು ಮಕ್ಕಳು ಜತೆಗಿದ್ದರು.

‘ಮೇಣದಲ್ಲಿ ನನ್ನ ಪ್ರತಿಕೃತಿ ತಯಾರಿಸುವ ಸಂಗತಿ ನಿಜಕ್ಕೂ ಅದ್ಭುತ ಅನುಭವ ನೀಡಿತು. ಚಿಕ್ಕ, ಪುಟ್ಟ ಸಂಗತಿಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ ಮೇಡಂ ಟುಸ್ಸಾಡ್ಸ್‌ ಸಿಬ್ಬಂದಿ ದಕ್ಷತೆ ಕಂಡು ಬೆರಗಾದೆ. ಪ್ರತಿಮೆ ಸಿದ್ಧವಾದ ಬಳಿಕ ನನ್ನ ಪತ್ನಿಯಮೊಬೈಲ್‌ ಫೋನ್‌ಗೆ ಚಿತ್ರ ಕಳಿಸಿದ್ದರು. ಅದನ್ನು ನೋಡಿ ದಂಗಾಗಿ ಹೋದೆ.ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ನನ್ನ ಸ್ನೇಹಿತರು ಕೂಡ ಆ ಚಿತ್ರವನ್ನು ನನ್ನ ಫೋಟೊ ಶೂಟ್‌ ಚಿತ್ರ ಎಂದು ಭಾವಿಸಿದ್ದರು’ ಎಂದು ಪ್ರಿನ್ಸ್‌ ತಮ್ಮ ಅನುಭವ ಬಿಚ್ಚಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.