ADVERTISEMENT

ಹೊರಬಿತ್ತು ಮಹೇಶ್‌ ಬಾಬು ಅಭಿನಯದ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ

ಏಜೆನ್ಸೀಸ್
Published 30 ಜನವರಿ 2026, 11:50 IST
Last Updated 30 ಜನವರಿ 2026, 11:50 IST
   

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ, ಮಹೇಶ್‌ ಬಾಬು ನಟನೆಯ ಬಹುನಿರೀಕ್ಷಿತ ‘ವಾರಾಣಸಿ’ ಸಿನಿಮಾ 2027ರ ಏಪ್ರಿಲ್‌ 07ರಂದು ತೆರೆಗೆ ಬರುತ್ತಿದೆ.

ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್‌ ಸುಕುಮಾರನ್‌ ತಾರಾಬಳಗದಲ್ಲಿದ್ದಾರೆ. ಸಿನಿಮಾದಲ್ಲಿ ಮಹೇಶ್‍ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‍ ಸುಕುಮಾರನ್‍ ಕ್ರಮವಾಗಿ ‘ಮೋಹಿನಿ’ ಮತ್ತು ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವು ಪ್ರೀಮಿಯಂ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಇರಲಿದೆ. 

ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್‍ ಬಿಝಿನೆಸ್‍ ಸಂಸ್ಥೆಗಳಡಿ ಕೆ.ಎಲ್‍.ನಾರಾಯಣ ಮತ್ತು ಎಸ್‍.ಎಸ್. ಕಾರ್ತಿಕೇಯ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್‍ ಕಥೆ-ಚಿತ್ರಕಥೆ ಬರೆದಿದ್ದು, ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಿದೆ.

ADVERTISEMENT

2025ರ ನವೆಂಬರ್‌ನಲ್ಲಿ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಬೃಹತ್‌ ಎಲ್‌ಇಡಿ ಪರದೆಯ ಮೇಲೆ ಚಿತ್ರದ ಟೈಟಲ್‌ ಟೀಸರ್‌ ಪ್ರದರ್ಶನಗೊಂಡಾಗ ರಾಜಮೌಳಿಯವರ ಹೊಸ ಕನಸಿನ ಲೋಕದ ಅನಾವರಣವಾಗಿತ್ತು. ಕೃತಕ ಗೂಳಿಯ ಮೇಲೆ ಕುಳಿತು, ಮಹೇಶ್‍ ಬಾಬು ತ್ರಿಶೂಲ ಹಿಡಿದು ವೇದಿಕೆಗೆ ಬಂದಿದ್ದರು. ಈ ವೇಳೆ ಸಾವಿರಾರು ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.