ADVERTISEMENT

‘ಸರ್ಕಾರು ವಾರಿ ಪಾಟ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2021, 13:11 IST
Last Updated 31 ಜುಲೈ 2021, 13:11 IST
ಪೋಸ್ಟರ್‌
ಪೋಸ್ಟರ್‌   

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ‘ಸರ್ಕಾರು ವಾರಿ ಪಾಟ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಶನಿವಾರ ಬಿಡುಗಡೆಯಾಗಿದೆ.

ತಮ್ಮ 45ನೇ ವರ್ಷದ ಹುಟ್ಟುಹಬ್ಬದಂದು (ಆ.09) ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದ ಮಹೇಶ್‌ ಬಾಬು ಈಗಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಬರುವ ಸಂಕ್ರಾಂತಿಗೆ ಜೊತೆಯಾಗೋಣ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ 2022ರ ಜನವರಿ 13ರಂದು ತೆರೆಗೆ ಬರಲಿದೆ.

ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ದೀರ್ಘಕಾಲ ಮುಂದೂಡಲ್ಪಟ್ಟಿತ್ತು. ಈಗಾಗಲೇಮೊದಲ ಹಂತದ ಶೂಟಿಂಗ್‌ ಮಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ.

ADVERTISEMENT

‘ಸರ್ಕಾರು ವಾರಿ ಪಾಟ’ ಸಿನಿಮಾಕ್ಕೆ ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್‌ ಅವರ ಚಿತ್ರಕಥೆ, ನಿರ್ದೇಶನವಿದೆ. ಈ ಸಿನಿಮಾವನ್ನು ಮೈತ್ರಿ ಮೂಮಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಎಸ್ಎಸ್ ತಮನ್ ಸಂಗೀತ ನಿರ್ದೇಶನವಿದೆ. ಮಹೇಶ್‌ ಬಾಬುಗೆ ಜೋಡಿಯಾಗಿಕೀರ್ತಿ ಸುರೇಶ್‌ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.