ADVERTISEMENT

ಮದುವೆಯಾದ ದಶಕದ ನಂತರ ಚಂದದ ಫೋಟೊ ಕ್ಲಿಕ್ಕಿಸಿದ ಭೂಪತಿಗೆ ಲಾರಾ ದತ್ತಾ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2021, 9:16 IST
Last Updated 24 ಡಿಸೆಂಬರ್ 2021, 9:16 IST
 ಬಾಲಿವುಡ್‌ ನಟಿ ಲಾರಾ ದತ್ತಾ
ಬಾಲಿವುಡ್‌ ನಟಿ ಲಾರಾ ದತ್ತಾ    

ಮುಂಬೈ: ಬಾಲಿವುಡ್‌ ನಟಿಲಾರಾ ದತ್ತಾ ಅವರು ಫೋಟೊಜೆನಿಕ್ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮದುವೆಯಾದ ಹತ್ತು ವರ್ಷಗಳಲ್ಲಿ ಲಾರಾ ಅವರ ಚಂದದ ಫೋಟೊವೊಂದನ್ನು ಕ್ಲಿಕ್ಕಿಸಲು ಅವರ ಪತಿ ಮಹೇಶ್‌ ಭೂಪತಿ ಅವರಿಗೆ ಸಾಧ್ಯವಾಗಿರಲೇ ಇಲ್ಲವಂತೆ.

ಇದನ್ನು ಸ್ವತಃ ಲಾರಾ ದತ್ತ ಅವರೇ ಬಹಿರಂಗಪಡಿಸಿದ್ದಾರೆ. ಅವರುಇತ್ತೀಚೆಗೆಮಾಲ್ಡಿವ್ಸ್‌ಪ್ರವಾಸದಲ್ಲಿ ಕ್ಲಿಕ್ಕಿಸಿದಕೆಲವು ಸುಂದರಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‌

ಫೋಟೊ ಜತೆ ತಮಾಷೆಯ ಬರಹವೊಂದನ್ನು ಲಾರಾ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಮದುವೆಯಾಗಿ ಒಂದು ದಶಕದ ನಂತರ ನನ್ನ ಪತಿ ಅಂತಿಮವಾಗಿ ನನ್ನ ಉತ್ತಮ ಫೋಟೊಕ್ಲಿಕ್ಕಿಸಲುಕಲಿತಿದ್ದಾರೆ. ಇದನ್ನುಪೋಸ್ಟ್ ಮಾಡದೇ ಇರಲುನನ್ನಿಂದಸಾಧ್ಯವಾಗಲಿಲ್ಲ.ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ,ಮಹೇಶ್ ಭೂಪತಿ ಅವರೇ, ನಿಮ್ಮ ಒಳಗಿನಪ್ರತಿಭೆಗಳನ್ನು ನೀವು ಅನ್ವೇಷಿಸುತ್ತಿದ್ದೀರಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.