ADVERTISEMENT

ಬಾಲಿವುಡ್‌ ಹಾಟ್‌ ಬ್ಯೂಟಿ ಮಲೈಕಾ ಈಸ್‌ ಬ್ಯಾಕ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 7:13 IST
Last Updated 10 ಜೂನ್ 2020, 7:13 IST
ಮಲೈಕಾ ಅರೋರಾ
ಮಲೈಕಾ ಅರೋರಾ   
""

ಬಾಲಿವುಡ್‌ ಹಾಟ್‌ ಬ್ಯೂಟಿಮಲೈಕಾ ಅರೋರಾ ಮತ್ತೆ ಸುದ್ದಿಯಲ್ಲಿದ್ದಾರೆ. ಫಿಟ್ನೆಸ್‌, ಹಾಟ್‌ ಲುಕ್‌, ಡ್ರೆಸ್‌, ಅಫೇರ್‌, ಡೇಟಿಂಗ್ ಹೀಗೆ ನಾನಾ ಕಾರಣಗಳಿಗಾಗಿ‌ ಸದಾ ಸುದ್ದಿಯಲ್ಲಿರುವ ಮಲೈಕಾ ಬಹಳ ದಿನಗಳ ಬ್ರೇಕ್‌ ನಂತರ ಯೋಗಾಸನದ ಫೋಟೊ ಹಂಚಿಕೊಂಡಿದ್ದಾರೆ.

46 ವಯಸ್ಸಿನಲ್ಲೂ ಬಳ್ಳಿಯಂತೆ ಬಳಕುವ ದೇಹಸಿರಿ ಹೊಂದಿರುವ ಮಲೈಕಾ ಮೊದಲಿನಿಂದಲೂ ಆರೋಗ್ಯ, ಸೌಂದರ್ಯ ಮತ್ತು ಫಿಟ್ನೆಸ್‌ಗೆ ಹೆಸರಾದವರು.

ಮಲೈಕಾ ಯೋಗ ಭಂಗಿ

ಲಾಕ್‌ಡೌನ್‌ ಅವಧಿಯಲ್ಲಿಮನೆಯಲ್ಲಿಯೇ ಯೋಗಾಭ್ಯಾಸ ಮಾಡುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ #ಮಲೈಕಾ ಮೂವ್‌ ಆಫ್ ‌ದಿ ವೀಕ್‌ ಹೆಸರಿನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಮೈಗೆ ಅಂಟಿಕೊಂಡಿರುವ ಕಡು ನೀಲಿ ಬಣ್ಣದ ಬಟ್ಟೆಯಲ್ಲಿ ದೇಹವನ್ನುಕಾಮನಬಿಲ್ಲಿನಂತೆ ಅರ್ಧ ವೃತ್ತಾಕಾರದಲ್ಲಿ ಮಣಿಸಿರುವ ಹಾಲಾಸನ ಭಂಗಿಯಲ್ಲಿ ಮಲೈಕಾರನ್ನು ನೋಡಿದರೆ ಬಳ್ಳಿಯಂತೆ ಬಳಕುವ ಆಕೆಯ ದೇಹ ಸೌಂದರ್ಯದ ಗುಟ್ಟು ಏನೆಂದು ಗೊತ್ತಾಗುತ್ತದೆ.

ನುರಿತ ಯೋಗ ಶಿಕ್ಷಕರ ದೇಹ ಕೂಡ ಅಷ್ಟು ಸುಂದರವಾಗಿ ಮಣಿಯಲಾರದೇನೋ ಎಂಬಷ್ಟುಮಲೈಕಾ ಅವರ ಹಾಲಾಸನ ಭಂಗಿ ಪರ್ಫೆಕ್ಟ್‌ ಆಗಿದೆ.

‘ಯೆಸ್‌, ಐ ಆಮ್‌ ಬ್ಯಾಕ್‌.... ಇಷ್ಟು ದಿನ ನಾನು ಎಲ್ಲಿ ಕಣ್ಮರೆಯಾಗಿದ್ದೆ ಎಂದು ಯೋಚಿಸುತ್ತಿದ್ದಿರಾ? ಈಗೋ ಮತ್ತೇ ನಾನು ಮರಳಿ ಬಂದಿದ್ದೇನೆ. ಈ ಲಾಕ್‌ಡೌನ್‌ ನಮ್ಮನ್ನು ನಾವು ಅರಿಯುವಂತೆ ಮಾಡಿದೆ. ನಮ್ಮನ್ನು ನಮ್ಮ ಬಳಿ ಮತ್ತಷ್ಟು ಹತ್ತಿರಕ್ಕೆ ಕರೆ ತಂದಿದೆ. ನಮಗಾಗಿ ನಾವು ಒಂದಿಷ್ಟು ಸಮಯ ಮೀಸಲಾಗಿಡಬೇಕಾಗುತ್ತದೆ’ ಎಂದು ಅಡಿ ಬರಹ ಬೇರೆ ಬರೆದಿದ್ದಾರೆ.

ಪ್ರತಿ ಸೋಮವಾರ ತಪ್ಪದೇ ಇನ್‌ಸ್ಟಾಗ್ರಾಂನಲ್ಲಿ ಯೋಗ ಭಂಗಿಯೊಂದನ್ನು ಪೋಸ್ಟ್‌ ಮಾಡುತ್ತಿದ್ದ ಈ ಸುಂದರಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೊಸ ಫೋಟೊ ಹಂಚಿಕೊಂಡಿರಲಿಲ್ಲ. ಸದ್ಯ ಮತ್ತೊಂದು ಹೊಸ ಸುದ್ದಿ ನೀಡುವವರೆಗೂ ಮಲೈಕಾ ಈ ಚಿತ್ರವೇ ಒಂದು ತಿಂಗಳಿಗಾಗುವಷ್ಟು ಸುದ್ದಿಗೆ ಆಹಾರವಾಗುವುದರಲ್ಲಿ ಅನುಮಾನವಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.