ADVERTISEMENT

ಮಲಯಾಳಂ ನಟ ಶಾನವಾಸ್ ನಿಧನ

ಪಿಟಿಐ
Published 5 ಆಗಸ್ಟ್ 2025, 13:33 IST
Last Updated 5 ಆಗಸ್ಟ್ 2025, 13:33 IST
<div class="paragraphs"><p>ಶಾನವಾಸ್</p></div>

ಶಾನವಾಸ್

   

Credit: X/@sri50

ತಿರುವನಂತಪುರ: ಮಲಯಾಳಂ ನಟ ಶಾನವಾಸ್ (71) ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ADVERTISEMENT

ದಿವಂಗತ ಹಿರಿಯ ನಟ ಪ್ರೇಮ್ ನಜೀರ್ ಅವರ ಪುತ್ರರಾದ ಶಾನವಾಸ್ ಅವರು ಕೆಲವು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಬಾಲಚಂದ್ರ ಮೆನನ್ ನಿರ್ದೇಶನದ ‘ಪ್ರೇಮಗೀತಂಗಳ್’ ಚಿತ್ರದ ಮೂಲಕ ಶಾನವಾಸ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ 50ಕ್ಕೂ ಹೆಚ್ಚು ಚಲನಚಿತ್ರಗಳು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಶಾನವಾಸ್ ವರು ಮೋಹನ್ ಲಾಲ್ ಅಭಿನಯದ ‘ಚೀನಾ ಟೌನ್’ ಹಾಗೂ 2022ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್ ಅವರ ‘ಜನಗಣಮನ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಶಾನವಾಸ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.