ADVERTISEMENT

ಮಲಯಾಳ ಚಿತ್ರರಂಗದ ಸಾಹಿತಿ ಮನಕೊಂಬು ಗೋಪಾಲಕೃಷ್ಣನ್ ನಿಧನ

ಪಿಟಿಐ
Published 17 ಮಾರ್ಚ್ 2025, 16:09 IST
Last Updated 17 ಮಾರ್ಚ್ 2025, 16:09 IST
<div class="paragraphs"><p>ಮನಕೊಂಬು ಗೋಪಾಲಕೃಷ್ಣನ್‌</p></div>

ಮನಕೊಂಬು ಗೋಪಾಲಕೃಷ್ಣನ್‌

   

ಎಕ್ಸ್ ಚಿತ್ರ

ಕೊಚ್ಚಿ: ಮಲಯಾಳ ಚಿತ್ರರಂಗದ ಗೀತ ಸಾಹಿತಿ ಮನಕೊಂಬು ಗೋಪಾಲಕೃಷ್ಣನ್‌ (78) ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ADVERTISEMENT

1970ರಿಂದ ಗೋಪಾಲಕೃಷ್ಣನ್ ಅವರು ಸುಮಾರು 200 ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ.

1971ರ ‘ವಿಮೋಚನ ಸಮರಮ್’ ಚಿತ್ರದ ಗೀತರಚನೆಕಾರರಾಗಿ ಅವರು ಚಿತ್ರರಂಗ ಪ್ರವೇಶಿಸಿದರು. 1974ರಲ್ಲಿ ಹರಿಹರನ್ ನಿರ್ದೇಶನದ ‘ಅಯಲಾತೆ ಸುಂದರಿ’ ಚಿತ್ರದ ಗೀತೆ ಮೂಲಕ ಜನಪ್ರಿಯತೆ ಪಡೆದುಕೊಂಡರು. ಗೀತ ರಚನೆಯೊಂದಿಗೆ ಕೆಲ ಚಿತ್ರಗಳಿಗೆ ಚಿತ್ರಕಥೆಯನ್ನೂ ಅವರು ರಚಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿಯ ಎರಡೂ ಭಾಗಗಳ ಚಿತ್ರಗಳ ಗೀತೆ ಮತ್ತು ಸಂಭಾಷಣೆಯನ್ನು ಮಲಯಾಳಂಗೆ ಇವರೇ ಭಾಷಾಂತರಿಸಿದ್ದರು.

ಮನಕೊಂಬು ಗೋಪಾಲಕೃಷ್ಣನ್‌ ನಿಧನಕ್ಕೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಸಂಗೀತ ರಸಿಕರ ಹೃದಯದಲ್ಲಿ ಮನಕೊಂಬು ಅವರ ಸಾಹಿತ್ಯ ಶಾಶ್ವತವಾಗಿ ಉಳಿಯಲಿದೆ. ಅವರು ರಚಿಸಿದ ಗೀತೆಗಳು ಕೇರಳದ ಸಾಂಸ್ಕೃತಿಕ ಜೀವನಕ್ಕೆ ಕನ್ನಡಿ ಹಿಡಿದಂತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.