
ಮಲಯಾಳ ಚಿತ್ರರಂಗದ ಹೆಸರಾಂತ ನಿರ್ದೇಶಕ ಅಡೂರು ಗೋಪಾಲ ಕೃಷ್ಣನ್ ಮತ್ತು ಮಮ್ಮೂಟಿ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ನಯನತಾರಾ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಒಂದು ಕಾಲಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಅಡೂರು ದಶಕಗಳ ಬಳಿಕ ಮತ್ತೆ ಕಮರ್ಷಿಯಲ್ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. 1950ರ ಬಹು ಜನಪ್ರಿಯ ಕಾದಂಬರಿ ‘ರಂಡಿಡಙಯಿ’ ಕಥೆ ಆಧಾರಿತ ಸಿನಿಮಾವಿದು. ‘ಚೋಮನ ದುಡಿ’ ರೀತಿಯದ್ದೇ ಕಥಾಹಂದರ ಹೊಂದಿರುವ ಚಿತ್ರ ಈ ತಿಂಗಳ ಅಂತ್ಯದಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ.
ಅಡೂರು ಈ ಹಿಂದೆ ಮಮ್ಮೂಟಿಗೆ ‘ಮದಿಲುಗಳ್’, ‘ವಿಧೇಯನ್’ ಚಿತ್ರಗಳನ್ನು ನಿರ್ದೇಶಿಸಿದ್ದರು. ಮಮ್ಮೂಟಿ ಹಾಗೂ ನಯನತಾರಾ ‘ಪುದಿಯ ನಿಯಮಮ್’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
‘ಪ್ರೀಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಈ ಪಾತ್ರಕ್ಕೆ ಮಮ್ಮೂಟಿ ಹೊರತಾಗಿ ಬೇರೆ ಯಾವ ನಟನೂ ಸೂಕ್ತವಲ್ಲ ಎನ್ನುವಂತಿದೆ. ಹೀಗಾಗಿ ಅವರ ಜತೆಯೇ ಈ ಸಿನಿಮಾ ಮಾಡಲು ನಿರ್ಧರಿಸಿದೆ’ ಎಂದು ಅಡೂರು ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.