ADVERTISEMENT

ವಿವಾದಕ್ಕೆ ಗುರಿಯಾದ ಮಂಗ್ಲಿಯ ‘ಮೈಸಮ್ಮ ದೇವಿ‘ ಹಾಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2021, 12:08 IST
Last Updated 19 ಜುಲೈ 2021, 12:08 IST
ಮಂಗ್ಲಿ
ಮಂಗ್ಲಿ   

ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯಲ್ಲೂ ತೆರೆಕಂಡಿತ್ತು. ತೆಲುಗು ಅವತರಿಣಿಕೆಯಲ್ಲಿನ'ಕಣ್ಣೇ ಅಧಿರಿಂದಿ' ಹಾಡುಮಾಸ್‌ ಹಿಟ್‌ ಆಗಿತ್ತು. ಈ ಹಾಡಿನ ಗಾಯಕಿಮಂಗ್ಲಿ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.

ಜನಪದ ಹಾಗೂ ಸಿನಿಮಾ ಹಾಡುಗಳ ಮೂಲಕ ತೆಲಂಗಾಣ ಹಾಗೂ ಆಂಧ್ರದಲ್ಲಿ ಮಂಗ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇದೀಗ ಅವರು ಹಾಡಿರುವ ‘ಮೈಸಮ್ಮ‘ ದೇವಿಯ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದಾರೆ.

ಆ ಹಾಡಿನಲ್ಲಿ ಮೈಸಮ್ಮ ದೇವಿಗೆ ಅವಮಾನ ಮಾಡಲಾಗಿದೆ. ಹಾಗೇ ಹಾಡಿನಲ್ಲಿ ಆಫ್ರಿಕಾ ಮೂಲದ ವ್ಯಕ್ತಿಯನ್ನು ತೋರಿಸಲಾಗಿದೆ, ಕೂಡಲೇ ಮಂಗ್ಲಿ ‘ಮೈಸಮ್ಮ‘ ದೇವಿಯ ಭಕ್ತರ ಕ್ಷಮೆಯಾಚಿಸಬೇಕು ಎಂದು ಮೈಸಮ್ಮ ಒಕ್ಕಲಿನವರು ಆಗ್ರಹಿಸಿದ್ದಾರೆ.

ADVERTISEMENT

ಮೈಸಮ್ಮ ದೇವಿಯ ಜನಪದ ಹಾಡು ಇರುವುದೇ ಬೇರೆ, ಆದರೆ ಮಂಗ್ಲಿ ತೋರಿಸಿರುವುದೇ ಬೇರೆ ಎಂದು ನೆಟ್ಟಿಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರುಭಕ್ತಿ ಹೆಸರಿನಲ್ಲಿ ದೇವತೆಗಳನ್ನು ಅಪಹಾಸ್ಯ ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.