ADVERTISEMENT

ಮಂಜು ವಾರಿಯರ್‌ ತಮಿಳು ಚಿತ್ರಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 4:35 IST
Last Updated 25 ಜನವರಿ 2019, 4:35 IST
ಮಂಜು ವಾರಿಯರ್‌
ಮಂಜು ವಾರಿಯರ್‌   

ಮಲಯಾಳಂ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಸಾಧನೆ ಮಾಡುತ್ತಿರುವ ಪ್ರತಿಭಾವಂತ ನಟಿ ಮಂಜು ವಾರಿಯರ್‌ ಅದೃಷ್ಟ ನಿಜಕ್ಕೂ ಸೂಪರ್‌ ಆಗಿದೆ. ಯಶಸ್ವಿ ಚಿತ್ರಗಳ ನಾಯಕ ನಟ ಧನುಷ್‌ ಚಿತ್ರದ ಮೂಲಕ ಮಂಜು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಬ್ಲಾಕ್‌ಬಸ್ಟರ್‌ ಸಿನಿಮಾಗಳ ಜೋಡಿ ಎಂದೇ ಕಾಲಿವುಡ್‌ನಲ್ಲಿ ಜನಪ್ರಿಯರಾಗಿರುವ ನಿರ್ದೇಶಕವೆಟ್ರಿಮಾರನ್‌ ಮತ್ತು ಧನುಷ್‌ ಅವರ ಚಿತ್ರ ‘ಅಸುರ’ದಲ್ಲಿ ಮಂಜು–ಧನುಷ್‌ ಡುಯೆಟ್‌ ಹಾಡಲಿದ್ದಾರೆ. ಮೋಹನ್‌ಲಾಲ್‌ ನಾಯಕತ್ವದ ‘ಓಡಿಯಾನ್‌’ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಮಂಜು ವಾರಿಯರ್‌ ದೊಡ್ಡ ಬ್ಯಾನರ್‌ನ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ವೆಟ್ರಿಮಾರನ್‌ ಅವರ ನಾಲ್ಕು ಚಿತ್ರಗಳಲ್ಲಿ ಧನುಷ್‌ ನಟಿಸಿದ್ದು, ಇದು ಈ ಜೋಡಿಯ ಐದನೇ ಚಿತ್ರವಾಗಲಿದೆ. ಮಂಜು ವಾರಿಯರ್‌ ಅವರ ಕಾಲ್‌ಶೀಟ್‌ ಖಚಿತವಾಗುತ್ತಿದ್ದಂತೆ ಧನುಷ್‌ ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ಎವರ್‌ಗ್ರೀನ್‌’ ಮಂಜು ವಾರಿಯರ್‌ ಜೊತೆ ‘ಅಸುರನ್‌’ನಲ್ಲಿ ನಟಿಸಲಿರುವ ಕಾರಣಕ್ಕೆ ಖುಷಿಯಾಗುತ್ತಿದೆ. ಇದೇ 26ರಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದು ಧನುಷ್‌ ಬರೆದಿದ್ದಾರೆ.

ADVERTISEMENT

ಆದರೆ ಚಿತ್ರತಂಡದ ಇತರ ಮಾಹಿತಿಗಳನ್ನು ನಿರ್ದೇಶಕರಾಗಲಿ, ಧನುಷ್‌ ಆಗಲಿ ಬಹಿರಂಗಪಡಿಸಿಲ್ಲ. ಈ ‘ಅಸುರನ್‌’, 1995ರಲ್ಲಿ ತೆರೆಕಂಡಿದ್ದ ತಮಿಳಿನ ಅಸುರನ್‌ ಚಿತ್ರದ ಮುಂದುವರಿದ ಭಾಗವೇ ಅಥವಾ ಅದೇ ಹೆಸರಿನ ಹೊಸ ಚಿತ್ರವೇ ಎಂಬುದು ಖಚಿತವಾಗಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.