ADVERTISEMENT

ಬಾಲಿವುಡ್‌ಗೆ ಹೊರಟ ‘ಮಂಸೋರೆ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 0:20 IST
Last Updated 15 ಡಿಸೆಂಬರ್ 2025, 0:20 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಕಲಾತ್ಮಕ ಚಿತ್ರಗಳಿಂದ ಗಮನ ಸೆಳೆದ ಕನ್ನಡದ ನಿರ್ದೇಶಕ ಮಂಸೋರೆ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಜೂಲಿಯೆಟ್‌’ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ನೀರಜ್‌ ತಿವಾರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್‌ ಲವ್‌ ಸ್ಟೋರಿ ಎಂಬುದು ಪೋಸ್ಟರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ‘ನಟ ನಟಿಯರ ಆಯ್ಕೆ ನಡೆಯುತ್ತಿದೆ. ಆಗಾಜ್‌ ನಿರ್ಮಾಣ ಸಂಸ್ಥೆ ಈ ಸಿನಿಮಾದೊಂದಿಗೆ 2026ರಲ್ಲಿ ಐದು ಸಿನಿಮಾಗಳ ನಿರ್ಮಾಣ ಗುರಿ ಹೊಂದಿದೆ’ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

ಮಂಸೋರೆ ಕಲಾತ್ಮಕ ಸಿನಿಮಾಗಳಿಂದಲೇ ಜನಪ್ರಿಯ. ‘ಹರಿವು’, ‘ನಾತಿಚರಾಮಿ’ ಉತ್ತಮ ಪ್ರಶಂಸೆಯ ಜತೆಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದವು. ‘ದೂರ ತೀರ ಯಾನ’ ಇವರ ಹಿಂದಿನ ಸಿನಿಮಾ.

ADVERTISEMENT
ಮಂಸೋರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.