ADVERTISEMENT

ಕಪ್ಪು ಉಡುಪಿನಲ್ಲಿ ಕಣ್ಮನ ಸೆಳೆದ ‘ಜಗದೇಕ ಸುಂದರಿ’ ಮಾನುಷಿ ಚಿಲ್ಲರ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 7:42 IST
Last Updated 29 ಆಗಸ್ಟ್ 2021, 7:42 IST
 ಮಾನುಷಿ ಚಿಲ್ಲರ್‌
 ಮಾನುಷಿ ಚಿಲ್ಲರ್‌   

2017ರಲ್ಲಿ ‘ಜಗದೇಕ ಸುಂದರಿ’ ಯಾಗಿದ್ದ ಮಾನುಷಿ ಚಿಲ್ಲರ್‌, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಬಳುಕುವ ಬಳ್ಳಿಯಂತಹ ದೇಹಕಾಯದ ‌ಈ ಚೆಲುವೆ, ವಿಶ್ವದಾದ್ಯಂತ ಅದೆಷ್ಟೋ ಮಂದಿ ಫಿಟ್‌ನೆಸ್‌ ಪ್ರಿಯರ ಪಾಲಿಗೂ ರೋಲ್‌ ಮಾಡೆಲ್‌. ಮಾನುಷಿಯಂತಾಗಲು ನಿತ್ಯ ಡಯಟ್‌ ಮಾಡುತ್ತಾ, ಜಿಮ್‌ನಲ್ಲಿ ಬೆವರು ಹರಿಸುವ ಯವತಿಯರ ಸಂಖ್ಯೆಯೂ ಕಡಿಮೆ ಇಲ್ಲ.

ಇವತ್ತಿಗೂ ಒಂದಿನಿತು ಕುಂದದ ಮಾನುಷಿಯವರ ಸೌಂದರ್ಯ ಮತ್ತು ಫಿಟ್‌ನೆಸ್‌ ಗುಟ್ಟು ಅನುಕರಿಸುವಂತಿದೆ. ಇತ್ತೀಚೆಗೆ ಮಾನುಷಿ ಕಪ್ಪು ಉಡುಪಿನಲ್ಲಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಆ ಚಿತ್ರಗಳು ವೈರಲ್‌ ಆಗಿವೆ.

ADVERTISEMENT

ಮಾನುಷಿ ಅವರ ನೂತನ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಚಿತ್ರಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.