ADVERTISEMENT

ಗಾಂಧಿ ಜಯಂತಿಗೆ ‘ಮ್ಯಾಟ್ನಿ’ಯ ಫಸ್ಟ್‌ಲುಕ್‌ ಹೊರಬಂತು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 7:08 IST
Last Updated 2 ಅಕ್ಟೋಬರ್ 2020, 7:08 IST
ನೀನಾಸಂ ಸತೀಶ್‌
ನೀನಾಸಂ ಸತೀಶ್‌   

ಸ್ಯಾಂಡಲ್‌ವುಡ್‌ನ ಅಭಿನಯ ಚತುರ ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರದ ಟೈಟಲ್‌ ‘ಮ್ಯಾಟ್ನಿ’. ಈ ಚಿತ್ರದ ಫಸ್ಟ್‌ಲುಕ್‌ ಕೂಡ ಗಾಂಧಿಜಯಂತಿಯಂದು ಬಿಡುಗಡೆಯಾಗಿದೆ.ನವೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.

ಈ ಚಿತ್ರಕ್ಕೆಮನೋಹರ್ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು,ಎಸ್‌.ಪಾರ್ವತಿ ಬಂಡವಾಳ ಹೂಡುತ್ತಿದ್ದಾರೆ. ಛಾಯಾಗ್ರಹಣ ಕ್ರಾಂತಿ ವರ್ಲ, ಸಂಗೀತ ನಿರ್ದೇಶನ ವಿ.ಪೂರ್ಣಚಂದ್ರ ತೇಜಸ್ವಿ, ಸಂಕಲನ ಕೆ.ಎಂ. ಪ್ರಕಾಶ್‌ ಅವರದು.

ಇದೊಂದು ಬಿಗ್‌ ಬಜೆಟ್‌ ಸಿನಿಮಾ.ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥಾಹಂದರವಿದೆ. ಕಥೆಯೂ ತುಂಬಾ ಚೆನ್ನಾಗಿದೆ. ನಿರ್ದೇಶಕರಿಗೆ ಮೊದಲ ಸಿನಿಮಾ ಆಗಿದ್ದರೂ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅವರು ಕಥೆ ಹೇಳಿದ ಶೈಲಿ ನೋಡಿಯೇಈ ಸಿನಿಮಾ ಅದ್ಭುತವಾಗಿ ಮಾಡಲಿದ್ದಾರೆ ಎಂದಿದ್ದರು ನೀನಾಸಂ ಸತೀಶ್‌.

ADVERTISEMENT

ಸತೀಶ್‌ ನಟಿಸಿರುವ ‘ಗೋದ್ರಾ’ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇನ್ನು ಶರ್ಮಿಳಾ ಮಾಂಡ್ರೆ ಜತೆಗೆ ತೆರೆ ಹಂಚಿಕೊಂಡಿರುವ ‘ದಸರಾ’ ಸಿನಿಮಾ ಚಿತ್ರೀಕರಣದ ಕೆಲ ಭಾಗದ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ. ಇನ್ನು 2021ರಲ್ಲಿ‘ಮೈ ನೇಮ್‌ ಈಸ್‌ ಸಿದ್ದೇಗೌಡ’ ಚಿತ್ರಕ್ಕೆ ಸತೀಶ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಂತೆ.

ಸತೀಶ್‌ ಸದ್ಯ ಎರಡು ತಿಂಗಳಿನಿಂದ ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದು, ಗ್ಯಾಂಗ್‌ಸ್ಟರ್‌ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಅದಕ್ಕಾಗಿಯೇ ಮೈಕಟ್ಟು ಹುರಿಗೊಳಿಸುತ್ತಿದ್ದಾರಂತೆ. ಆ ಚಿತ್ರ ಯಾವುದೆಂದು ಸದ್ಯಕ್ಕೆ ಬಾಯಿಬಿಡದಿರುವ ಸತೀಶ್‌ ಕುತೂಹಲ ಕಾಯ್ದುಕೊಳ್ಳುವ ಜಾಣ್ಮೆ ತೋರುತ್ತಿದ್ದಾರೆ. ಈ ವರ್ಷಾಂತ್ಯದೊಳಗೆಗ್ಯಾಂಗ್‌ಸ್ಟರ್‌ ಪಾತ್ರದ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.