ADVERTISEMENT

#MeToo: ಅರ್ಜುನ್ ಸರ್ಜಾ ಅರ್ಜಿ ವಿಚಾರಣೆ ನ.2ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 11:00 IST
Last Updated 31 ಅಕ್ಟೋಬರ್ 2018, 11:00 IST
   

ಬೆಂಗಳೂರು:ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ದಾಖಲಿಸಿರುವ ದೂರು ರದ್ದು ಮಾಡಬೇಕು ಎಂದು ಕೋರಿ ನಟ ಅರ್ಜುನ ಸರ್ಜಾ ದಾಖಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ನ‌ವೆಂಬರ್ 2ರಂದು ವಿಚಾರಣೆ ನಡೆಸಲಿದೆ.

‘ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು’ ಎಂದು ಕೋರಿ ನ್ಯಾಯಮೂರ್ತಿಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜುನ ಸರ್ಜಾ ಪರ ಹಿರಿಯ ವಕೀಲ ಬಿ.ವಿ‌.ಆಚಾರ್ಯ ಬುಧವಾರ ಮೆಮೊ ಸಲ್ಲಿಸಿದರು.

‘ಪ್ರಕರಣ ಗಂಭೀರವಾಗಿದೆ. ಇಂದೇ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಮನವಿ‌ ಮಾಡಿದರು.

ADVERTISEMENT

ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಶುಕ್ರವಾರ (ನ.2) ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.