ವಿಶ್ವದ ಪ್ರತಿಷ್ಠಿತ ಮತ್ತು ಚಿತ್ತಾಕರ್ಷಕ ಫ್ಯಾಶನ್ ಶೋ ಮೆಟ್ ಗಾಲಾ 2025ರಲ್ಲಿ ಭಾರತೀಯ ಚಿತ್ರರಂಗದ ಹಲವು ಕಲಾವಿದರು ಹೆಜ್ಜೆ ಹಾಕಿದರು. ಬಾಲಿವುಡ್‌ನ ಶಾರುಖ್ ಖಾನ್, ಪಂಜಾಬಿ ಗಾಯಕ ದಿಲ್‌ಜಿತ್, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕಿಯಾರ ಅಡ್ವಾಣಿ ಬ್ಲೂ ಕಾರ್ಪೆಟ್‌ನಲ್ಲಿ ಕಣ್ಮನ ಸೆಳೆಯುವ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದರು. ಇದು ಇವರ ಚೊಚ್ಚಲ ಮೆಟ್ ಗಾಲಾ. ನಟಿ ಪ್ರಿಯಾಂಕ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಜೊತೆ ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. ತಮ್ಮ ನೆಲವನ್ನು ಪ್ರತಿನಿಧಿಸುತ್ತಾ ದಿಲ್‌ಜಿತ್ ಪಟಿಯಾಲದ ಮಹಾರಾಜ ಭುಪಿಂದರ್ ಸಿಂಗ್‌ಗೆ ಗೌರವ ಸಲ್ಲಿಸಿದರು.
ಪ್ರಿಯಾಂಕ ಚೋಪ್ರಾ,
ನಿಕ್ ಜೋನಸ್
ಇನ್ನು ನಟ ಶಾರುಖ್ ಖಾನ್ ಅವರನ್ನು ತಾವ್ಯಾರು ಎಂದು ವಿದೇಶಿ ಮಾಧ್ಯಮದ ಪ್ರತಿನಿಧಿಯೊಬ್ಬರು ಇದೇ ಕಾರ್ಯಕ್ರಮದಲ್ಲಿ ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರತ್ಯುತ್ತರವಾಗಿ ‘ನಾನು ಶಾರುಖ್’ ಎಂದು ಮಾತು ಪ್ರಾರಂಭಿಸಿದ ಅವರು, ತಮ್ಮ ವಸ್ತ್ರವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಬಗ್ಗೆ ಮಾತನಾಡಿದ್ದಾರೆ. ಇದು ಶಾರುಖ್ ಅವರ ನಮ್ರತೆಯನ್ನು ತೋರುತ್ತದೆ ಎಂದು ಹಲವರು ಹೇಳಿದ್ದರೆ, ವಿದೇಶಿ ಮಾಧ್ಯಮಗಳ ಅಜ್ಞಾನದ ಬಗ್ಗೆ ಹಲವರು ಕಿಡಿಕಾರಿದ್ದಾರೆ.
ದಿಲ್‌ಜಿತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.