ವಿನು ಗೌಡ, ಮೋಕ್ಷಿತ ಪೈ
‘ಬಿಗ್‌ಬಾಸ್’ ಖ್ಯಾತಿಯ ಮೋಕ್ಷಿತ ಪೈ ನಾಯಕಿಯಾಗಿ ನಟಿಸಿರುವ ‘ಮಿಡಲ್ ಕ್ಲಾಸ್ ರಾಮಾಯಣ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಧನುಶ್ ಗೌಡ ವಿ. ನಿರ್ದೇಶನವಿದೆ.
‘ಇದೊಂದು ಮಿಡಲ್ ಕ್ಲಾಸ್ ರಾಮಾಯಣ ಎಂಬುದು ಶೀರ್ಷಿಕೆಯಿಂದಲೇ ತಿಳಿಯುತ್ತದೆ.. ನಾಯಕ ಕಪ್ಪು ಹುಡುಗಿಯನ್ನು ಯಾಕೆ ಇಷ್ಟ ಪಟ್ಟು ಮದುವೆಯಾದ ಎಂಬುದೇ ಕಥೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನನ್ನ ಎರಡನೇ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ. ಆದರೆ ಮೊದಲು ಕನ್ನಡ ಭಾಷೆಯ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದರು ನಿರ್ದೇಶಕರು.
ಅಂಜನಾದ್ರಿ ಪ್ರೊಡಕ್ಷನ್ ಹಾಗೂ ವಾವ್ ಸ್ಟುಡಿಯೋಸ್ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ಅವರು ನಿರ್ಮಾಣ ಮಾಡಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಧಾರಾವಾಹಿ, ರಿಯಾಲಿಟಿ ಶೋಗಳಿಗಿಂತ ಒಂದು ಸಿನಿಮಾ ಮಾಡಿ ಬಿಡುಗಡೆ ಮಾಡುವುದು ಸಾಹಸ. ಶೀಘ್ರದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ’ ಎಂದರು ಮೋಕ್ಷಿತ.
ಅಲೆಕ್ಸ್ ಸಂಗೀತ, ವಿನೋದ್ ಲೋಕಣ್ಣನವರ್ ಛಾಯಾಚಿತ್ರಗ್ರಹಣವಿದೆ. ಎಸ್ ನಾರಾಯಣ್, ವೀಣಾ ಸುಂದರ್, ಮಜಾಭಾರತ ಜಗ್ಗಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.