ನಟಿ ಮಿಲನ ನಾಗರಾಜ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಹಸೆಮಣೆ ಏರುವ ದಿನಾಂಕ ನಿಗದಿಯಾಗಿದೆ. ಲವ್ ಮಾಕ್ಟೇಲ್ ಚಿತ್ರದ ಬಳಿಕ ಲವ್ ಮಾಕ್ಟೇಲ್ -2 ಚಿತ್ರದಲ್ಲಿ ಈ ಜೋಡಿ ತೊಡಗಿತ್ತು. ಈ ಚಿತ್ರ ಬಿಡುಗಡೆ ಬಳಿಕ ತಮ್ಮ ಮದುವೆ ಎಂದು ಕೃಷ್ಣ ಅವರು ಈ ಹಿಂದೆ ತಿಳಿಸಿದ್ದರು.
ಈಗ ಮದುವೆ ದಿನಾಂಕವನ್ನು ಮಿಲನ ನಾಗರಾಜ್ ಅವರು ಟ್ವಿಟರ್ನಲ್ಲಿ ಪ್ರಕಟಿಸಿದ್ದು ನಿಶ್ಚಿತಾರ್ಥ ಸನ್ನಿವೇಶದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಿಲನ ಅವರು ೨೦೧೩ರಲ್ಲಿ`ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ದರ್ಶನ ಅಭಿನಯದ ಬೃಂದಾವನ ಚಿತ್ರದಲ್ಲಿಯೂ ನಟಿಸಿದ್ದರು. ಒಂದು ಮಲೆಯಾಲಂ ಚಿತ್ರದಲ್ಲೂ ನಟಿಸಿದ್ದಾರೆ. ಮೂಲತಃ ಹಾಸನದವರು.
ಡಾರ್ಲಿಂಗ್ ಕೃಷ್ಣ ಅವರ ಮೂಲ ಹೆಸರು ಸುನೀಲ್ ನಾಗಪ್ಪ. `ಜಾಕಿ', `ಹುಡುಗರು' ಚಿತ್ರದಲ್ಲಿ ದುನಿಯಾ ಸೂರಿ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಸುನೀಲ್ ಅವರದ್ದು. ‘ಮದರಂಗಿ’ ಅವರು ನಾಯಕನಟನಾಗಿ ನಟಿಸಿದ ಮೊದಲ ಚಿತ್ರ. ನಂತರ `ಚಾರ್ಲಿ',`ಜಾಲಿ ಬಾರು ಮತ್ತು ಪೋಲಿ ಹುಡುಗರು',`ಮುಂಬೈ' ಚಿತ್ರಗಳಲ್ಲಿ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.