ಬಹುತೇಕ ಹೊಸಬರೆ ಸೇರಿ ನಿರ್ಮಿಸುತ್ತಿರುವ ‘ಮಗ್ಗಿಪುಸ್ತಕ’ ಚಿತ್ರದ ಹಾಡೊಂದಕ್ಕೆ ಜನಪ್ರಿಯ ಗಾಯಕ ಎಂ.ಎಂ.ಕೀರವಾಣಿ ಧ್ವನಿಯಾಗಿದ್ದಾರೆ. ಈ ಚಿತ್ರವನ್ನು ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಯತಿರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಯಶಸ್ ನಾಚಪ್ಪ ಸಂಗೀತ ನಿರ್ದೇಶನವಿದೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ಖ್ಯಾತಿಯ ಎಂ.ಎಂ.ಕೀರವಾಣಿ ತುಂಬಾ ವರ್ಷಗಳ ನಂತರ ಕನ್ನಡ ಹಾಡಿಗೆ ಧ್ವನಿಯಾಗಿರುವುದು ವಿಶೇಷ. ವಿಷ್ಣುವರ್ಧನ್ ಅವರ ‘ಅಪ್ಪಾಜಿ’, ‘ಜಮೀನ್ದಾರ’ ಚಿತ್ರದ ನಂತರ ಕನ್ನಡದಲ್ಲಿ ಅವರು ನಮ್ಮ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಕನ್ನಡದ ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಗುರುರಾಜ್ ಹೊಸಕೋಟೆ, ನವೀನ್ ಸಜ್ಜು, ರವೀಂದ್ರ ಸುರಗಾವಿ ಸೇರಿದಂತೆ 18 ಗಾಯಕರು ಹಾಡಿದ್ದಾರೆ. ಇದೊಂದು ಸದಭಿರುಚಿಯ ಮಕ್ಕಳ ಚಿತ್ರ. ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಹಂತದಲ್ಲಿದೆ’ ಎಂದಿದ್ದಾರೆ ನಿರ್ದೇಶಕರು.
ರಂಜನ್ ಕಾಸರಗೋಡು, ರಕ್ಷ ಗೌಡ, ಮೇಘನಾ, ರಾನ್ವಿ ಶೇಖರ್ ಮುಂತಾದವರು ಚಿತ್ರದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಮಂಗಳೂರು, ಎಚ್.ಡಿ. ಕೋಟೆ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ನಂದಕುಮಾರ್ ಛಾಯಾಚಿತ್ರಗ್ರಹಣ, ಶಿವಕುಮಾರ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.