ADVERTISEMENT

ನಿರ್ದೇಶನಕ್ಕಿಳಿದ ನಟ ಮೋಹನ್‌ಲಾಲ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:31 IST
Last Updated 31 ಜುಲೈ 2019, 19:31 IST
ಮೋಹನ್‌ ಲಾಲ್
ಮೋಹನ್‌ ಲಾಲ್   

ನಿರ್ದೇಶಕನಾಗುವ ತಮ್ಮ ಮನದ ಇಂಗಿತವನ್ನು ಈಚೆಗೆ ಮೋಹನ್‌ಲಾಲ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ನಟ ‘ಬಾರೋಸ್‌’ ಎಂಬ ಬಿಗ್‌ ಬಜೆಟ್‌ ಥ್ರೀಡಿ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ವಾಸ್ಕೋಡಿಗಾಮ ಸಂಪತ್ತಿನ ಕಾವಲುಗಾರನಾದ ಬಾರೋಸ್‌ನ ಕತೆ ಈ ಸಿನಿಮಾವಾಗಿದ್ದರಿಂದ ಪೋರ್ಚುಗೀಸ್‌ ಕಥಾಹಂದರ ಹೊಂದಿದೆ. ಹೀಗಾಗಿ ಆ ಕಾಲದ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದರಲ್ಲಿ ಸ್ಪೇನ್‌ನ ನಟಿ ಪಜ್‌ ವೇಗಾ ಹಾಗೂ ನಟ ರಫೇಲ್‌ ಅಮರ್ಗೊ ಅವರು ಪಾತ್ರ ಮಾಡಲಿದ್ದಾರೆ. ಅಂತರರಾಷ್ಟ್ರೀಯ ಸಿನಿಮಾದಲ್ಲಿ ಪಜ್‌ ವೇಗಾ ಹೆಸರು ಚಿರ‍ಪರಿಚಿತವಾಗಿದ್ದು, ಅವರು ‘10 ಟೈಮ್ಸ್‌ ಆರ್‌ ಲೆಸ್‌’, ‘ದ ಸ್ಪಿರಿಟ್‌’ ಹಾಗೂ ‘ಏಂಜೆಲ್‌ ಆಫ್‌ ಎವಿಲ್‌’ ಸಿನಿಮಾದ ಮೂಲಕ ಪ್ರಸಿದ್ಧರಾಗಿದ್ದಾರೆ. ಸದ್ಯ ಅವರ ನಟನೆಯ ‘ರ‍್ಯಾಂಬೋ: ಲಾಸ್ಟ್‌ ಬ್ಲಡ್‌’ ಬಿಡುಗಡೆಗೆ ಸಿದ್ಧವಾಗಿದೆ.

ADVERTISEMENT

ರಫೇಲ್‌ ಅಮರ್ಗೊ ಜನಪ್ರಿಯ ಸ್ಪಾನಿಷ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಬಾರೋಸ್‌’ ಸಿನಿಮಾದಲ್ಲಿ ಅಮರ್ಗೊ ವಾಸ್ಕೋಡಿಗಾಮನ ಪಾತ್ರದಲ್ಲಿ, ಹಾಗೂಪಜ್‌ ವೇಗಾ, ಆತನ ಪ್ರೇಮಿಯ ಪಾತ್ರ ನಿರ್ವಹಿಸಲಿದ್ದಾರೆ. ಬಾರೋಸ್‌ ಪಾತ್ರವನ್ನು ಸ್ವತಃ ಮೋಹನ್‌ಲಾಲ್‌ ಮಾಡಲಿದ್ದಾರೆ.

ಚಿತ್ರಕತೆಯನ್ನು ಥ್ರೀಡಿ ಸಿನಿಮಾ ‘ಮೈ ಡಿಯರ್‌ ಕುಟ್ಟಿಚಾತನ್‌’ ನಿರ್ದೇಶಕ ಜಿಜುಪುನ್ನೋಸೆ ಬರೆಯಲಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.