ADVERTISEMENT

ದೃಶ್ಯಂ–3 ಸಿನಿಮಾ ಘೋಷಣೆ ಮಾಡಿದ ನಿರ್ಮಾಪಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2022, 10:09 IST
Last Updated 28 ಆಗಸ್ಟ್ 2022, 10:09 IST
ಮೋಹನ್‌ ಲಾಲ್‌
ಮೋಹನ್‌ ಲಾಲ್‌   

ದೃಶ್ಯಂ ಸರಣಿಯ ಮೂರನೇ ಭಾಗ ಸೆಟ್ಟೆರಲಿದೆ ಎಂದು ಚಿತ್ರ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದು ಮಲಯಾಳಂನಲ್ಲಿ ತಯಾರಾಗಲಿದೆ. ದೃಶ್ಯಂ–3 ಈ ಹಿಂದಿನ ಎರಡು ಭಾಗಗಳ ಮುಂದುವರಿದ ಭಾಗವಾಗಿದೆ ಎಂದುಆಂಟೋನಿ ಪೆರಂಬವೂರ್ ಖಚಿಪಡಿಸಿದ್ದಾರೆ.

ಈ ಚಿತ್ರಕ್ಕೆ 'ದೃಶ್ಯಂ 3: ದಿ ಕನ್ ಕ್ಲೂಷನ್' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಶೂಟಿಂಗ್‌ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಮಲಯಾಳಂನಲ್ಲಿಜೀತು ಜೋಸೆಫ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ADVERTISEMENT

ಮಲಯಾಳಂನಲ್ಲಿ ಮೋಹನ್‌ ಲಾಲ್‌, ಕನ್ನಡದಲ್ಲಿ ರವೀಚಂದ್ರನ್‌ ಹಾಗೂ ತೆಲುಗಿನಲ್ಲಿ ವೆಂಕಟೇಶ್‌ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.