ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಎನ್‌ಸಿಬಿ ಯತ್ನಿಸುತ್ತಿದೆ ಎಂದು ಆರ್ಯನ್ ಖಾನ್ ತಿಳಿಸಿದ್ದಾರೆ.
ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿಕೆಗಳನ್ನು ದಾಖಲಿಸಿರುವ ಆರ್ಯನ್ ಖಾನ್, 'ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಎನ್‌ಸಿಬಿ ಯತ್ನಿಸುತ್ತಿದೆ. ಇದು ನ್ಯಾಯಸಮ್ಮತವಲ್ಲದ ಪ್ರಕ್ರಿಯೆ' ಎಂದು ದೂರಿದ್ದಾರೆ.
'ನನ್ನ ವಾಟ್ಸ್‌ಆ್ಯಪ್ ಸಂದೇಶಗಳ ವ್ಯಾಖ್ಯಾನವನ್ನು ತನಿಖಾಧಿಕಾರಿಯೊಬ್ಬರು ಮಾಡಿದ್ದಾರೆ. ಅಂತಹ ವ್ಯಾಖ್ಯಾನವೇ ತಪ್ಪು ಮತ್ತು ನ್ಯಾಯಸಮ್ಮತವಲ್ಲದ್ದು' ಎಂದು ಆರ್ಯನ್ ಖಾನ್ ಮನವಿಯಲ್ಲಿ ತಿಳಿಸಿದ್ದಾರೆ.
ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ತಿಳಿಸಿದೆ.
ಆರ್ಯನ್ ಖಾನ್ ಪರ ವಕೀಲ ಸತೀಶ್ ಮಾನಶಿಂಧೆ ಅವರು ತುರ್ತು ವಿಚಾರಣೆಗೆ ಕೋರಿ ನ್ಯಾಯಮೂರ್ತಿ ಎನ್. ಡಬ್ಲ್ಯು.ಸಾಂಬ್ರೆ ಅವರ ಏಕ ಸದಸ್ಯ ಪೀಠದ ಎದುರು ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಆರೋಪಿಗಳಾದ ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.