ADVERTISEMENT

‘ನನ್ನ ತಮ್ಮ ಅಪರೂಪದ ಪ್ರತಿಭಾವಂತ’: ಸುಶಾಂತ್ ಸಹೋದರಿ ಶ್ವೇತಾ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:46 IST
Last Updated 1 ಸೆಪ್ಟೆಂಬರ್ 2020, 7:46 IST
ಸುಶಾಂತ್ ಸಿಂಗ್‌ ರಜಪೂತ್‌
ಸುಶಾಂತ್ ಸಿಂಗ್‌ ರಜಪೂತ್‌   

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊಗಳನ್ನು ಹಂಚಿಕೊಂಡಿರುವ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ‘ನನ್ನ ತಮ್ಮ ಅಪರೂಪದ ಪ್ರತಿಭಾವಂತ’ ಎಂದು ಬರೆದುಕೊಂಡಿದ್ದಾರೆ.

ಶ್ವೇತಾ ಹಿಂದೊಮ್ಮೆ ತಮ್ಮನ ಕುರಿತಾದ ವಿಡಿಯೊಗಳನ್ನು ಹಂಚಿಕೊಂಡು ಭಾವುಕರಾಗಿ ಬರೆದುಕೊಂಡಿದ್ದರು. ಈಗಮತ್ತೊಮ್ಮೆ ಸುಶಾಂತ್‌ಗೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಳೆಯೊಂದರ ಮೇಲೆ ಎರಡೂ ಕೈಯಿಂದ ಬರೆಯುತ್ತಿರುವ ವಿಡಿಯೊ ಹಂಚಿಕೊಂಡು ‘ಅಪರೂಪದ ಪ್ರತಿಭಾವಂತ’ ಎಂಬ ಅಡಿಬರಹ ಬರೆದುಕೊಂಡಿದ್ದಾರೆ.

ಸುಶಾಂತ್‌ ಒಂದೇ ಸಮಯಕ್ಕೆ ಎರಡೂ ಕೈಯಿಂದ ಬರೆಯುವ ಸಾಮರ್ಥ್ಯ ಹೊಂದಿದ್ದರು. ಅವರು ಬಿಳಿ ಹಾಳೆಯೊಂದರ ಮೇಲೆ ’ಯಾವುದು ಅಸಾಧ್ಯವಲ್ಲ’ ಎಂದು ಬಲಗಡೆ ಹಾಗೂ ಎಡಗಡೆ ಎರಡೂ ಕಡೆಯಿಂದ ಬರೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಶ್ವೇತಾ.

ADVERTISEMENT

‘ಕನ್ನಡಿ ಬರಹ – ಇದನ್ನು ಪ್ರಪಂಚದಲ್ಲಿ ಕೇವಲ ಶೇ 1 ರಷ್ಟು ಮಂದಿ ಅಷ್ಟೇ ಮಾಡಲು ಸಾಧ್ಯ. #ನನ್ನ ಸಹೋದರ ದಿ ಬೆಸ್ಟ್‌# ಜಸ್ಟಿಸ್ ಫಾರ್ ಸುಶಾಂತ್ ಸಿಂಗ್‌ರಜಪೂತ್‌#ಗ್ಲೋಬಲ್‌ಪ್ರೇಯರ್ಸ್‌ಫಾರ್‌ಎಸ್‌ಎಸ್‌ಆರ್‌ ಎಂದು ಅಡಿಬರಹವನ್ನು ಹಾಕಿಕೊಂಡಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ ಸುಶಾಂತ್ ಶಾಲಾ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿರುವ ವಿಡಿಯೊ ಹಂಚಿಕೊಂಡಿರುವ ಶ್ವೇತಾ ’ಇದು ನನ್ನ ತಮ್ಮ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.