ADVERTISEMENT

Kannada Movies: ಹೊಸಬರ ‘ನಾನು ಕರುಣಾಕರ’ 

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 21:19 IST
Last Updated 7 ಡಿಸೆಂಬರ್ 2025, 21:19 IST
ಆರ್ಯನ್‌ ತೇಜಸ್‌, ಭವೀಶ್‌, ರಾಧಾ ಭಗವತಿ
ಆರ್ಯನ್‌ ತೇಜಸ್‌, ಭವೀಶ್‌, ರಾಧಾ ಭಗವತಿ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ನಾನು ಕರುಣಾಕರ’ ಚಿತ್ರ ಫೆ.6ರಂದು ತೆರೆಗೆ ಬರಲಿದೆ. ಆರ್ಯನ್ ತೇಜಸ್ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. 

‘ಅಪ್ಪ–ಮಗ ಹಾಗೂ ಗಂಡ–ಹೆಂಡತಿಯ ಬಾಂಧವ್ಯದ ಸುತ್ತ ಸಾಗುವ ಕಥೆ. ಇಡೀ ಕುಟುಂಬ ಕುಳಿತು ನೋಡಿದಾಗ ಇಲ್ಲಿನ ಪಾತ್ರಗಳು ಎಲ್ಲರ ಮನೆಯಲ್ಲೂ ಇರುವುದು ನಮಗೆ ಅರಿವಾಗುತ್ತದೆ. ಕಾಮಿಡಿ ಜಾನರ್‌ನ ಕಥೆಯಿದು’ ಎಂದಿದ್ದಾರೆ ನಿರ್ದೇಶಕ. 

‘ನಮ್ಮ ಪಾಪ್ ಕಾರ್ನ್’ ಸಿನಿಮಾ ಪ್ರೊಡಕ್ಷನ್‌ ಬಂಡವಾಳ ಹೂಡಿದೆ. ರಾಧಾ ಭಗವತಿ ನಾಯಕಿ. ಭವೀಶ್, ಕರಿಸುಬ್ಬು,
ಎಂ.ಕೆ ಮಠ, ಬಿ.ಎಂ. ವೆಂಕಟೇಶ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.