‘ಟಗರು ಪಲ್ಯ’ ಬೆನ್ನಲ್ಲೇ ನಟ ನಾಗಭೂಷಣ್ ‘ವಿದ್ಯಾಪತಿ’ಯಾಗಿ ತೆರೆಗೆ ಬರಲಿದ್ದಾರೆ. ‘ಇಕ್ಕಟ್’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್ ಹಾಗೂ ಹಸೀಂ ಖಾನ್ ನಿರ್ದೇಶನದ ಈ ಸಿನಿಮಾ ಏ.10ರಂದು ತೆರೆಗೆ ಬರಲಿದೆ.
ಸಂಕ್ರಾಂತಿಯಂದು ಚಿತ್ರದ ನಿರ್ಮಾಪಕ ನಟ ‘ಡಾಲಿ’ ಧನಂಜಯ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಧನಂಜಯ ಅವರ ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಚಿತ್ರ ಇದಾಗಿದ್ದು, ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಕರಾಟೆ ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ನಾಯಕಿಯಾಗಿ ‘ಉಪಾಧ್ಯಕ್ಷ’ ಸಿನಿಮಾ ಖ್ಯಾತಿಯ ಮಲೈಕಾ ಟಿ. ವಸುಪಾಲ್ ಬಣ್ಣಹಚ್ಚಿದ್ದಾರೆ. ಬಹುದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು, ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ನಿರ್ದೇಶನದ ಜೊತೆಗೆ ಸಿನಿಮಾದ ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ನಿಭಾಯಿಸಿದ್ದಾರೆ ಇಶಾಂ ಖಾನ್ ಹಾಗೂ ಹಸೀಂ ಖಾನ್. ಲವಿತ್ ಛಾಯಾಚಿತ್ರಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.