ರಮೇಶ್ ಕಾಮತ್ ನಿರ್ದೇಶನದ ಕೊಂಕಣಿ ಸಿನಿಮಾ ‘ನಗ್ನಸತ್ಯ’ ಇತ್ತೀಚೆಗಷ್ಟೇ ಸೆಟ್ಟೇರಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಿರಿಯ ನಟ ಸುರೇಶ್ ಹೆಬ್ಳಿಕರ್ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
‘ಕೆಲವು ವರ್ಷಗಳ ಹಿಂದೆ ಭೂಪಾಲ್‌ನಲ್ಲಿ ಮಹಿಳೆ ಮೇಲೆ ಶೋಷಣೆ ಮಾಡಿದ ಸುದ್ದಿ ಪ್ರಕಟವಾಗಿತ್ತು. ಅದರ ಒಂದು ಎಳೆಯನ್ನು ತೆಗೆದುಕೊಂಡು ಚಿತ್ರಕಥೆ ಮಾಡಲಾಗಿದೆ. ಸಮಾಜದಲ್ಲಿ ಹೆಣ್ಣುಮಗಳು ಹಿಂಸೆಗೆ ಗುರಿಯಾಗುತ್ತಾಳೆ. ಆಕೆಗೆ ಎಲ್ಲಿಯೂ ನ್ಯಾಯ ಸಿಗುವುದಿಲ್ಲ. ಮುಂದೆ ಇದರ ವಿರುದ್ಧ ಹೋರಾಡಿ, ಸಮಾಜಕ್ಕೆ ಯಾವ ಎಚ್ಚರಿಕೆ ಕೊಡುತ್ತಾಳೆ ಎಂಬುದನ್ನು ಕುತೂಹಲದ ಮೂಲಕ ತೋರಿಸಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ಕರ್ನಾಟಕದಲ್ಲಿ ಇಲ್ಲಿಯವರೆಗೂ ಈ ಚಿತ್ರ ಸೇರಿ ಹತ್ತು ಕೊಂಕಣಿ ಚಿತ್ರಗಳು ಬಂದಿದ್ದು, ಅದರಲ್ಲಿ ಐದು ನಾನೇ ನಿರ್ದೇಶನ ಮಾಡಿದ್ದೇನೆ’ ಎಂದರು ನಿರ್ದೇಶಕರು.
ಆದಿತ್ಯ ಸಿನಿ ಕ್ರಿಯೇಶನ್ಸ್ ಬಂಡವಾಳ ಹೂಡುತ್ತಿದೆ. ಆದ್ಯಾ ನಾಯಕ್ ಮುಖ್ಯಪಾತ್ರದಲ್ಲಿದ್ದಾರೆ. ಗಣೇಶ್ ಪ್ರಭು, ಗೋಪಿನಾಥ್ ಭಟ್, ಆನಂದ್ ನಗರಕರ್, ಗೋಪಿ ಭಟ್ ಮುಂತಾದವರು ಚಿತ್ರದಲ್ಲಿದ್ದಾರೆ. ಸುರೇಶ್ ಸಂಗೀತ, ಪಿ.ವಿ.ಆರ್.ಸ್ವಾಮಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.